Breaking News

ಹೋರಾಟ ಮಾಡಿದವರು ನಿರುದ್ಯೋಗಿಗಳು: ಬಿಜೆಪಿ ಹೋರಾಟಗಾರರ ವಿರುದ್ಧ ಗುಡುಗಿದ ಶಾಸಕ ಬಸವರಾಜ್ ಶಿವಗಂಗಾ

Spread the love

ದಾವಣಗೆರೆ : ನಿನ್ನೆ ಹೋರಾಟ ಮಾಡಿದವರು ನಿರುದ್ಯೋಗಿಗಳು ಎಂದು ಬಿಜೆಪಿ ಹೋರಾಟಗಾರರ ವಿರುದ್ಧ ಶಾಸಕ ಬಸವರಾಜ್ ಶಿವಗಂಗಾ ಗುಡುಗಿದ್ದಾರೆ.

ಭದ್ರಾ ಬಲದಂಡೆ ಸೀಳಿ ಅವೈಜ್ಞಾನಿಕ ಕಾಮಗಾರಿ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಯಾವ ವಿಚಾರಕ್ಕೆ ಎಲ್ಲಿ ಹೋಗಿ ಪ್ರತಿಭಟನೆ ಮಾಡ್ಬೇಕು ಅಂತಾ ಅವರಿಗೆ ಗೊತ್ತಿಲ್ಲ. ಅವರ ಸರ್ಕಾರದಲ್ಲಿ ಕಾಮಗಾರಿಗೆ 2022ರಲ್ಲಿ ಅನುಮತಿ ನೀಡಲಾಗಿದೆ. ಕೆಲಸವಿಲ್ಲದ ಕಾರಣಕ್ಕೆ ನಿರುದ್ಯೋಗಿಗಳು ಪ್ರತಿಭಟನೆ ಮಾಡಿದ್ದಾರೆ. ನಾನು ಅಧಿಕಾರಿಗಳ ಜೊತೆ ಅದನ್ನು ಚರ್ಚೆ ಮಾಡುತ್ತೇನೆ. ಆ ಕಾಮಗಾರಿಯಿಂದ ಯಾರಿಗೆ ಸಮಸ್ಯೆ ಆಗಲಿದೆ ಎಂದು ತಿಳಿದುಕೊಂಡು ಮಾತನಾಡುವೇ ಎಂದಿದ್ದಾರೆ.

ಸರ್ಕಾರದಲ್ಲಿ ಹಣವಿಲ್ಲ ಅನ್ನೋ ಚರ್ಚೆ ವಿಚಾರವಾಗಿ ಮಾತನಾಡಿ, ದಾವಣಗೆರೆಯಲ್ಲಿ ಸಾವಿರಾರು ಕೋಟಿ ಕಾಮಗಾರಿಗೆ ಚಾಲನೆ ನೀಡಿದೆ. ಹಣ ಇಲ್ಲದೇ ಕಾಮಗಾರಿಗೆ ಚಾಲನೆ ಕೊಡೋದಕ್ಕೆ ಆಗಲ್ಲ. ಎಲ್ಲ ಸರಿ ಇದೆ, ಕೆಲ ಹಿರಿಯರು ಮಾತಾಡಿದ್ದಾರೆ ಮಾತನಾಡಬಾರದಿತ್ತು. ಆ ರೀತಿ ಮಾತನಾಡಬಾರದಿತ್ತು. ಸಿಎಲ್​​ಪಿ ಮೀಟಿಂಗ್ ವೇಳೆ ಮಾತನಾಡಬೇಕು. ನಾನು ನೋಡಿದ್ದೇನೆ. ಅಲ್ಲಿ ಯಾರೂ ಮಾತನಾಡುವುದಿಲ್ಲ. ಆ ಮೀಟಿಂಗ್​​ನಲ್ಲಿ ಯಾರೂ ಕೂಡ ಸಿಂಹ , ಹುಲಿ ಇಟ್ಕೊಂಡು ಕೂತೀರೋದಿಲ್ಲ. ಮಾತನಾಡಿದರೆ ಆಯ್ತು, ಅಲ್ಲಿ ಮಾತಾನಾಡೋದಿಲ್ಲ, ಸುಮ್ಮನೆ ಮಾಧ್ಯಮಗಳ ಮುಂದೆ ಏನೇನೋ ಮಾತಾಡ್ತಾರೆ. ನಾವು ಸರ್ಕಾರದ ಪರ ನಿಲ್ಲಬೇಕು. ಏನೇ ಇದ್ದರೂ ಸಿಎಂ ಬಳಿ ಮಾತನಾಡಿ, ಸುಖಾಸುಮ್ಮನೆ ವಿಪಕ್ಷಕ್ಕೆ ಅಸ್ತ್ರ ನೀಡಬೇಡಿ. ಸರ್ಕಾರದಲ್ಲಿ ಸಾಕಷ್ಟು ಅನುದಾನ ಇದೆ. ಅನುದಾನ ಇರೋದಕ್ಕೆ ಗುದ್ದಲಿ ಪೂಜೆ ಮಾಡ್ತಾ ಇದ್ದೇವೆ ಎಂದು ತಿಳಿಸಿದ್ದಾರೆ.

ಅನಂತಕುಮಾರ್ ಹೆಗಡೆ ಗನ್​ಮ್ಯಾನ್​​ಗಳಿಂದ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಸಮುದಾಯವಿರಲಿ ಹಲ್ಲೆ ಮಾಡಬಾರದು, ಯಾರೇ ಹಲ್ಲೆ ಮಾಡಿದರೂ ಅದು ತಪ್ಪು, ಕ್ರಮ ಆಗಬೇಕು ಎಂದು ಹೇಳಿದ್ದಾರೆ. ಲೋಕಾಯುಕ್ತ ಪೊಲೀಸ್ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿ, ಅದಕ್ಕೆಲ್ಲಾ ಗೃಹಮಂತ್ರಿ ಇದ್ದಾರೆ, ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ