Breaking News

ಅಜ್ಜಿ ತಿಥಿ ಕಾರ್ಯಕ್ಕೆ ಹೋಗಿದ್ದವರ ಮನೆಯಲ್ಲಿ ಕಳ್ಳತನ

Spread the love

ಆನೇಕಲ್, ಜೂನ್​ 15: ಅಜ್ಜಿಯ ತಿಥಿ ಕಾರ್ಯಕ್ಕೆ ಹೋದವರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಅತ್ತ ಹಳೆ ಮನೆಯಲ್ಲಿ ಮನೆ ಮಂದಿಯಲ್ಲ ಸೇರಿ ಅಜ್ಜಿಯ ತಿಥಿ ಕಾರ್ಯ ಮಾಡುತ್ತಿದ್ದರೇ, ಇತ್ತ ಕಳ್ಳರು ಮಾತ್ರ ಹೊಸ ಮನೆಯಲ್ಲಿದ್ದ 240 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮೇ 2ನೇ ತಾರೀಖು ರಾತ್ರಿ ಪ್ರೇಮಾ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 240 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಪ್ರೇಮಾ ಅವರು ಮಗಳ ಮದುವೆಗಾಗಿ 240 ಗ್ರಾಂ ಚಿನ್ನ ಖರೀದಿಸಿದ್ದರು ಎಂದು ತಳಿದುಬಂದಿದೆ. ಸೂರ್ಯನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೂರ್ಯನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸುಧಾಕರ್ (37) ಆಜಯ್ (36), ಅರವಿಂದ್ ಬಂಧಿತರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಗಾ, 9 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ 9 ಪ್ರಕರಣಗಳಲ್ಲಿ ಒಂದು ಕೆಜಿಗೂ ಅಧಿಕ ಚಿನ್ನ ಕದ್ದಿದ್ದಾರೆ. ಆದರೆ, ಇಲ್ಲಿಯವರೆಗೆ 290 ಗ್ರಾಂ ಚಿನ್ನ ಮಾತ್ರ ರಿಕವರಿಯಾಗಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ