ಕಾಗವಾಡಕರ್ನಾಟಕ-ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮಗಳನ್ನು ಸೇತುವೆ ಮುಖಾಂತರ ಜೋಡಿಸುವುದು ಕಾರ್ಯ ಜುಗುಳು-ಖಿದ್ರಾಪುರ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡುಗಟ್ಟಿ ಸೇತುವೆ ನಿರ್ಮಿಸುವ ಕಾಮಗಾರಿ ಕೈಗೊಂಡು ಕೊನೆ ಹಂತದಲ್ಲಿ ಇದೆ ಆದರೆ ಮಹಾರಾಷ್ಟ್ರದ ಸರ್ಕಾರ ಸಹಕಾರ ನೀಡದೆ ಇದ್ದಿದ್ದರಿಂದ ಸೇತುವೆ ಕಟ್ಟಡ ಸನ 2018 ಗೆ ಚಾರ್ಲಿ ನೀಡಲಾಗಿದೆ ಸನ 2023 ರಲ್ಲಿ ಕಟ್ಟಡ ಪೂರ್ಣಗೊಳಿಸಿ ಲೋಕಾರಪಣೆ ಮಾಡಬೇಕಾಗಿತ್ತು, ಆದರೆ ಇವರಿಗೆ ಅಪೂರ್ಣವಾಗಿ ಉಳಿದಿದೆ. ಇದರಿಂದ ಸ್ಥಳೀಯರು ನಿರಾಶಗೊಂಡಿದ್ದಾರೆ.
ಆಗಿನ ಸಂಸದ ಸದಸ್ಯರಾದ ಪ್ರಕಾಶ ಹುಕ್ಕೇರಿ ಇವರು ಜುಗುಳ-ಖಿದ್ರಾಪುರ, ಮುಳವಾಡ-ಚಿಂಚಲಿ, ಉಗಾರ-ಕುಡಚಿ ಮೂರು ಸೇತುವೆಗಳು ಕೃಷ್ಣಾ ನದಿಗೆ ಅಡ್ಡಗಟ್ಟಿ ನಿರ್ಮಿಸಲು ಚಾಲನೆ ನೀಡಿದ್ದರು ಇದಕ್ಕೆ ಸ್ಥಳೀಯ ಶಾಸಕ ರಾಜು ಕಾಗೆ ವಿಶೇಷವಾಗಿ ಪ್ರಯತ್ನಿಸಿದರು.
ಜೋಗುಳ- ಖಿದ್ರಾಪುರ ಮಧ್ಯದ ಸೇತುವೆ ನಿರ್ಮಿಸಲು ಸುಮಾರು 21 ಕೋಟಿ ಅನುದಾನ ಮಂಜೂರು ಗೊಳಿಸಿದರು ಈ ಕಾಮಗಾರಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಇವರಿಂದ ಆಕಾರ ಅಭಿನವ ಮುಂಬೈ ಈ ಗುತ್ತಿಗೆದಾರರು ಕಾಮಗಾರಿ ಕೈಗೊಂಡಿದ್ದರು ಈಗ 2025 ಬಂದರು ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣಾ ನದಿಗೆ ಮಹಾಪೂರ ಬಂದಾಗ ಈ ಸೇತುವೆಗಳ ನೆನಪು ಬರುತ್ತದೆ. ಉಳಿದ ಅವಧಿಯಲ್ಲಿ ಯಾರು ಇದರ ಬಗ್ಗೆ ಚಕಾರಿಯತ್ತಿಲ್ಲ ಎಂದು ಸಮಾಜ ಸೇವಕರು ಹಾಗೂ ನ್ಯಾಯವಾದಿಗಳಾದ ರಾವ್ ಸಾಹೇಬ
ಭಿಷ್ಟನವರ ಇವರು ಹೇಳಿದರು.
ಆಗಿನ ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಇವರು ರಾಜ್ಯದ ಮುಖ್ಯಮಂತ್ರಿಗಳನ್ನು, ಇಲಾಖೆಯ ಮುಖ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಕಟ್ಟಡದ ಪರಿಶೀಲನೆ ಮಾಡುತ್ತಾ ಶೀಘ್ರದಲ್ಲಿ ಸೇತುವೆ ಪೂರ್ಣಗೊಳಿಸಲು ವಿಶೇಷವಾಗಿ ಪ್ರಯತ್ನಿಸಿದ್ದಾರೆ ಎಂದು ರಾವ ಸಾಹೇಬ
ಭಷ್ಟನವರ ಹೇಳಿದರು.
ಸೇತುವೆ ಆಚೆ ಇರುವ ಮಹಾರಾಷ್ಟ್ರದ ಶಿರೋಳ ತಾಲೂಕಿನ ಖಿದ್ರಾಪುರ ಗ್ರಾಮದ ಮುಖಂಡರು ಅಧಿಕಾರಿಗಳು ನಿರ್ಲಕ್ಷೆ ವಹಿಸುತ್ತಿದ್ದಾರೆ. ಅವರ ಹದ್ದಿಯಲ್ಲಿ ಬರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರಕ್ಕೆ ಒಪ್ಪಿಸಲಿಬೇಕಾಗಿದೆ ಕರ್ನಾಟಕ ಸರ್ಕಾರ ಭೂಮಿ ಸ್ವಾಧೀನ ಪಡೆದ ಕೊಂಡ ಬಳಿಕ ಆಗುತ್ತಿರುವ ಅದರ ಮೊತ್ತ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದೆ ಇಷ್ಟಾದರೂ ದುರ್ಲಕ್ಷ ವಹಿಸುತ್ತಿದ್ದಾರೆ. ಶಿರಳ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ರಾಜೇಂದ್ರ ಪಾಟೀಲ ಇವರು ಮುತುವರ್ಜಿ ವಹಿಸಿ ನಿನಗುದ್ದಿಗೆ ಬಿದ್ದಿರುವ ಈ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು.
ಕರ್ನಾಟಕ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಿದ್ದು ಇದರ ಸದುಪಯೋಗ ಪಡೆದುಕೊಂಡು ಸೇತುವೆ ಪೂರ್ಣಗೊಳಿಸಿದರೆ ಮಳೆಗಾಲದಲ್ಲಿ ಇಲ್ಲಿಯ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ತಪ್ಪಿಸಲು ಸಹಕಾರ ವಾಗಲಿದೆ. ಈ ಸೇತುವೆಯಿಂದ ಅಧಿಕ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಜನರು ಸುರಕ್ಷಿತ ಸ್ಥಳಕ್ಕೆ ಬರಲು ಸಾಧ್ಯವಿದೆ. ಈ ಕಾರಣ ಸೇತುವೆ ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಗಮನ ಸೆಲ್ಲಿಸಬೇಕೆಂದು ಕಾಂಗ್ರೆಸ್ ಪಕ್ಷದ ಕಾಗವಾಡ ಮತ ಕ್ಷೇತ್ರದ ಯುವ ಘಟಕ ಅಧ್ಯಕ್ಷ ಉಮೇಶ ಪಾಟೀಲ ಕರಿ ನೀಡಿದರು.
ಕಾಗವಾಡ ತಾಲೂಕಿನ ಅನೇಕ ಗ್ರಾಮದ ಮುಖಂಡರು ಸೇತುವೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ನೀರಾವರಿ ನಿಗಮದ ಅಧಿಕಾರಿಗಳು ಪ್ರೀತಿಸುಬೇಕೆಂದು ತಮ್ಮ ಅಭಿಪ್ರಾಯಗಳು ವ್ಯಕ್ತಪಡಿಸಿದ್ದಾರೆ.
Laxmi News 24×7