ಕಬ್ಬಿನ ಬೆಳೆಯಲ್ಲಿ ನಿಖರ ಕೃಷಿ ಮತ್ತು ಡ್ರೋಣ ತಂತ್ರಜ್ಞಾನ ಬಳಕೆÀ ಕುರಿತು” ವಿಚಾರ ಸಂಕಿರಣ
ಕಬ್ಬಿನ ಬೆಳೆಯಲ್ಲಿ ನಿಖರ ಕೃಷಿ ಮತ್ತು
ಡ್ರೋಣ ತಂತ್ರಜ್ಞಾನ ಬಳಕೆÀ ಕುರಿತು
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ವಿಚಾರ ಸಂಕಿರಣ
ಸುಮಾರು ೧೨೦ ಜನರು ಪಡೆದುಕೊಂಡರು ಸದುಪಯೋಗ
ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ ಬೆಳಗಾವಿ, ಇಂಡಿಯನ್ ಫಾಮರ್ಸ್ ಫರ್ಟಿಲೈರ್ಸ್ ಕೋ-ಆಪ್ ಲಿ. ಕಂಪನಿಯ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿಗಳು ಸಿಬ್ಬಂದಿಯವರಿಗೆ “ಕಬ್ಬಿನ ಬೆಳೆಯ ಕೃಷಿಯಲ್ಲಿ ನಿಖರ ಕೃಷಿ ಮತ್ತು ಡ್ರೋಣ ತಂತ್ರಜ್ಞಾನ ಬಳಕೆ” ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ರಾಜಗೋಪಾಲ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ.ಬಿ. ಪಾಟೀಲ್, ಡಾ|| ಬಿ.ಟಿ. ನಾಡಗೌಡರ, ಡಾ|| ಮಿಲಿಂದ ಪೋತದಾರ ನವೀನ ಎನ್.ಇ. ಸಹಾಯಕ ಪ್ರಾಧ್ಯಾಪಕರು .ನವೀನಕುಮಾರ ಪಾಟೀಲ, ಅಧಿಕಾರಿಗಳು ಇಂಡಿಯನ್ ಫಾಮರ್ಸ್ ಫರ್ಟಿಲೈರ್ಸ್ ಕೋ-ಆಪ್ ಲಿ.ಕಂಪನಿ ರವರು ಭಾಗವಹಿಸಿದ್ದರು.
ಡಾ||ಎಂ. ಬಿ. ಪಾಟೀಲ ಅವರು ರೈತರ ಆರ್ಥಿಕ ಸಬಲತೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವುದು, ಸಾವಯವ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಳ ಉಪಯೋಗ, ಶಿಫಾರಸ್ಸಿನಂತೆ ಪೋಷಕಾಂಶಗಳ ಬಳಕೆ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದು ತಿಳಿಸಿದರು. ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಾರ್ಖಾನೆಯ ಸಿಬ್ಬಂದಿಗಳು ಕಾರ್ಖಾನೆ ವ್ಯಾಪ್ತಿಯಲ್ಲಿ ಬರುವ ಕಬ್ಬು ಬೆಳೆಗಾರರಿಗೆ ಹೊಸ ತಾಂತ್ರಿಕತೆಗಳನ್ನು ಮನದಟ್ಟು ಮಾಡುವುದು ಅತ್ಯವಶ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ರಾಜಗೋಪಾಲ ಅವರು ಮಾತನಾಡುತ್ತ, ಸಂಸ್ಥೆಯಲ್ಲಿ ಕಬ್ಬು ಕೃಷಿ ಹಾಗೂ ಸಂಶೋಧನೆಗೆ ಸಂಬAಧಿಸಿದAತೆ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ, ಕಾರ್ಖಾನೆ ಸಿಬ್ಬಂದಿ ಮತ್ತು ಕಬ್ಬು ಬೆಳೆಗಾರರಿಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಡಾ|| ಮಿಲಿಂದ ಪೋತದಾರ, ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥರಾದ ಆರ್.ಬಿ. ಸುತಗುಂಡಿ, ಸಂತೋಷಕುಮಾರ ಪೂಜಾರಿ ಸೇರಿದಂತೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ೧೨೦ ಕ್ಕೂ ಅಧಿಕ ಕಾರ್ಖಾನೆಗಳ ಕಬ್ಬು ಅಭಿವೃದ್ಧಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿಯವರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
Laxmi News 24×7