Breaking News

ಚರಂಡಿಯಲ್ಲಿ ಹರಿದು ಬಂತು ಬರೊಬ್ಬರಿ ಮೂರು ಅಡಿ ಉದ್ದದ ತಲೆದಿಂಬು…!!!

Spread the love

ತುಂಬಾ ದಿನದಿಂದ ಬೆಳಗಾವಿಯ ಛತ್ರಪತಿ ಶಿವಾಜೀ ನಗರದಲ್ಲಿನ ಚರಂಡಿ ಬ್ಲಾಕ್ ಆಗಿದೆ ಎಂದು ಸ್ಥಳೀಯರು ದೂರುತ್ತಿದ್ದರು. ಆದರೇ, ಬ್ಲಾಕೇಜ್ ಕ್ಲೀಯರ್ ಮಾಡಲು ಬಂದ ಮಹಾನಗರ ಪಾಲಿಕೆ ಸಿಬ್ಬಂದಿ ಕಾದಿತ್ತು ಭಾರಿ ಅಚ್ಚರಿ.
 ಬೆಳಗಾವಿಯ ಛತ್ರಪತಿ ಶಿವಾಜೀ ನಗರದಲ್ಲಿನ ಚರಂಡಿ ಬ್ಲಾಕ್ ಆಗಿದೆ ಎಂದು ಸ್ಥಳೀಯರು ದೂರುತ್ತಿದ್ದರು. ಈ ಹಿನ್ನೆಲೆ ಇಂದು ನಗರಸೇವಕಿ ರೇಷ್ಮಾ ಭೈರಕದಾರ ಮಹಾನಗರ ಪಾಲಿಕೆಯ ಸಿಬ್ಬಂದಿಗಳನ್ನು ಕರೆಯಿಸಿ ಬ್ಲಾಕೇಜ್ ಕ್ಲೀಯರ್ ಮಾಡಿಸುವಾಗ ಅಚ್ಚರಿಯ ಸಂಗತಿಯೊಂದು ಕಾದಿತ್ತು.
ಚರಂಡಿಯಲ್ಲಿ ತ್ಯಾಜ್ಯ ಸಿಕ್ಕು ಬ್ಲಾಕೇಜ್ ಆಗುವುದು ಸಾಮಾನ್ಯ ಆದರೇ, ಇಲ್ಲಿನ ಚರಂಡಿಯಲ್ಲಿ ಮಾತ್ರ ಒಂದಲ್ಲ, ಎರಡಲ್ಲ. ಬರೋಬ್ಬರಿ ಮೂರು ಅಡಿ ಉದ್ದದ ತಲೆದಿಂಬು ಸಿಕ್ಕಿ ಹಾಕಿಕೊಂಡಿತ್ತು. ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಹಲವಾರು ಗಂಟೆಗಳ ಕಾಲ ಹರಸಾಹಸಪಟ್ಟು ಅದನ್ನು ಹೊರತೆಗೆದು ನೀರನ್ನು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು.
ಈ ವೇಳೆ ನಗರಸೇವಕಿ ರೇಷ್ಮಾ ಭೈರಕದಾರ್ ಯಾರೂ ಕೂಡ ಈ ರೀತಿಯ ದೊಡ್ಡ ದೊಡ್ಡ ವಸ್ತುಗಳನ್ನು ಚರಂಡಿಗೆ ಎಸೆಯಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ