Breaking News

ಸೈನಿಕರ ಒಳಿತಿಗಾಗಿ ಪ್ರಾರ್ಥಿಸಿದ ಗಣಪತಿ ಸಚ್ಚಿದಾನಂದ ಸ್ವಾಮೀ

Spread the love

ಮೈಸೂರು: ಮೈಸೂರಿನ ಅವಧೂತ‌ ದತ್ತ ಪೀಠದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಭಗವದ್ಗೀತಾ ಪಾರಾಯಣ ಮಾಡಿ, ನಮ್ಮ ದೇಶದ ಸೈನಿಕರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ. ಆಶ್ರಮದ ನಾದ ಮಂಟಪದಲ್ಲಿ ಇಂಟರ್​​ನ್ಯಾಷನಲ್ ಗೀತಾ ಫೌಂಡೇಶನ್ ವತಿಯಿಂದ ನಡೆದ ಭಗವದ್ಗೀತೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಶ್ರೀಗಳು ಪದಕ ಮತ್ತು ಪ್ರಮಾಣ ಪತ್ರ ವಿತರಿಸುವ ಮೊದಲು ಗೀತಾ ಪಾರಾಯಣ ಮಾಡಿದರು.

ನಮ್ಮ ಇಡೀ ದೇಶದ ಜನರನ್ನು ಕಾಪಾಡುತ್ತಿರುವ ಮತ್ತು ತ್ಯಾಗ ಮಾಡುತ್ತಿರುವ ಸೈನಿಕರಿಗೆ ಒಳಿತು ಮಾಡುವಂತೆ ಹಾಗೂ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಅಪಮೃತ್ಯು ಹೊಂದಿದವರಿಗೆ ಸದ್ಗತಿ ಸಿಗಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿದರು.ಈ ಕುರಿತು ಮಾತನಾಡಿದ ಅವರು, “ಇಂಟರ್​ನ್ಯಾಷನಲ್ ಗೀತಾ ಫೌಂಡೇಶನ್ ಅವರು ದತ್ತ ಪೀಠದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಈ ಪರೀಕ್ಷೆಯಲ್ಲಿ ದೊಡ್ಡವರು, ಚಿಕ್ಕ ಮಕ್ಕಳು ಎಲ್ಲರೂ ತೇರ್ಗಡೆಯಾಗುತ್ತಿರುವುದು ಒಳ್ಳೆಯ ವಿಷಯ” ಎಂದು ಹೇಳಿದರು


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ