Breaking News

ಶಿವಾಜಿ ಮಹಾರಾಜರು ಬರೀ ಮರಾಠಿಗರಿಗೆ ಸೀಮಿತವಾದ ವ್ಯಕ್ತಿ ಅಲ್ಲಾ. ಅಂಬೇಡ್ಕರ್ ಅವರನ್ನ ಬರೀ ದಲಿತರು ಗೌರವಿಸುವುದು ಸರಿಯಲ್ಲ.

Spread the love

ಬೆಳಗಾವಿ :ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ.
ಶಿವಾಜಿ ಮಹಾರಾಜರು ಬರೀ ಮರಾಠಿಗರಿಗೆ ಸೀಮಿತವಾದ ವ್ಯಕ್ತಿ ಅಲ್ಲಾ.
ಅಂಬೇಡ್ಕರ್ ಅವರನ್ನ ಬರೀ ದಲಿತರು ಗೌರವಿಸುವುದು ಸರಿಯಲ್ಲ.
ಎಲ್ಲರೂ ಗೌರವಿಸುವ‌ ಕೆಲಸ ಆಗಬೇಕೆಂದ ಸತೀಶ್ ಜಾರಕಿಹೊಳಿ‌.
ಶಿವಾಜಿ ಮಹಾರಾಜರ ಬಗ್ಗೆ ಪರವಾದ ವಿರೋಧವಾದ ಲೇಖನ ಇವೆ.
ಈ ದೇಶದಲ್ಲಿ ಒಬ್ರೂ ಲೆಫ್ಟ್ ಹೋಗ್ತಾರೆ ಮತ್ತೊಬ್ಬರು ರೈಟ್ ಹೋಗ್ತಾರೆ.
ಲೆಫ್ಟ್ ಇದ್ದವರು ರೈಟ್ ಬರಲ್ಲಾ, ರೈಟ್ ಇದ್ದವರು ಲೆಫ್ಟ್ ಬರಲ್ಲಾ.
ಇದರಿಂದ ದೇಶ ಅಭಿವೃದ್ಧಿಗೆ ತೊಂದರೆ ಆಗ್ತಿದೆ.
ಈ ಹಂತದಲ್ಲಿ ದೇಶ ದೊಡ್ಡ ಮಟ್ಟಕ್ಕೆ ಬೆಳೆಯಬೇಕಿತ್ತು.
ದಲಿತರನ್ನು ಮುಖ್ಯವಾಹಿನಿಗೆ ತರುವ ಕೆಲಸ ಶಿವಾಜಿ ಮಹಾರಾಜರು ಮಾಡಿದ್ದರು.
ಶಿವಾಜಿ ಮಹಾರಾಜರ ಸೇನೆಯಲ್ಲಿ ಹಿಂದೂಗಳಿಗಿಂತ ಮುಸ್ಲಿಂಮರು ಹೆಚ್ಚಿದ್ದರು.
ಖಾಜಿ ಅಂತಾ ಶಿವಾಜಿ ಮಹಾರಾಜರ ಜೊತೆಗೆ ವಕೀಲರಿದ್ರೂ.
ಶಿವಾಜಿ ಭಾವಚಿತ್ರ ಬಿಡಿಸಿದವರು ಮೊಹಮ್ಮದ್‌ ಮಧಾರಿ ಅನ್ನೊರು.
ಇಂದು ದೇಶದಲ್ಲಿ ವಿಭಿನ್ನವಾಗಿ ಹೋಗುತ್ತಿದ್ದರು.
ಶಿವಾಜಿ ಮಹಾರಾಜರು ಮಹಾನ್ ಬುದ್ಧಿಜೀವಿ.
ಮೊಗಲ್ ರಿಂದ ಭಾರತ ರಕ್ಷಣೆ ಮಾಡಬೇಕು ಅಂತಾ ಶಿವಾಜಿ ಮಹಾರಾಜರ ಮನಸ್ಸಿನಲ್ಲಿತ್ತು.
ಶಿವಾಜಿ ಮಹಾರಾಜರ ಹತ್ಯೆಗೆ ಪ್ರಯತ್ನ ಮಾಡಿದವರು ಮುಸ್ಲಿಂರು ಅಲ್ಲಾ.
ಬದಲಿಗೆ ಶಿವಾಜಿ ಅವರ ಹತ್ಯೆಗೆ ಪ್ರಯತ್ನ ಮಾಡಿದ್ದು ನಮ್ಮವರೇ.
ಶೂದ್ರ ಅನ್ನೋ ಕಾರಣಕ್ಕೆ ಅವರಿಗೆ ಪಟ್ಟಾಭಿಷೇಕ ಮಾಡಲು ಕೊಟ್ಟಿರಲಿಲ್ಲ.
ಶಿವಾಜಿ ಮಹಾರಾಜರ ಕೊನೆ ಅವಧಿಯಲ್ಲಿ ಬಹಳ ತೊಂದರೆ ಕೊಡುವ ಪ್ರಯತ್ನ ಅಯ್ತು.
ಶಿವಾಜಿ ಅವರ ಕಾಲದಲ್ಲೇ ಇಂಟ್ಲಿಜೆನ್ಸಿ ಇತ್ತು.
ಶಿವಾಜಿ ಮಹಾರಾಜರ ಕಾರ್ಯಾವಧಿಯಲ್ಲಿ ಮಸೀದಿಯನ್ನ ಕಟ್ಟಿದ್ದರು.
ಅವರೇ ಮುಂದೆ ನಿಂತು ರಾಯಘಡ ಕಿಲ್ಲಾದಲ್ಲಿ ಮಸೀದಿ ಕಟ್ಟಿಸಿದ್ರೂ.
ಶಿವಾಜಿ ಮಹಾರಾಜರ ಸಮಾಧಿಯನ್ನ ಮುಚ್ಚಿಡಲಾಗಿತ್ತು.
ಇವರ ಇತಿಹಾಸ ಹೊರ ಬಂದ್ರೇ ದೊಡ್ಡ ಹೆಸರು ಆಗುತ್ತೆ ಅಂತಾ ಮುಚ್ಚಿಟ್ಟಿದ್ದರು.
ಇಂದು ಅವರ ಪರವಾಗಿ ಇದ್ದವರೇ ಇತಿಹಾಸ ಮುಚ್ಚಿಡುವ ಕೆಲಸ ಮಾಡಿದ್ರೂ.
ಜ್ಯೋತಿಬಾ ಫುಲೆ ಅವರು ಜಗತ್ತಿಗೆ ಇತಿಹಾಸ ತಿಳಿಸುವ ಕೆಲಸ ಮಾಡಿದ್ರೂ.
ಇದನ್ನ ಹೇಳುವ ಕೆಲಸ ಮಾಡಿದ್ರೇ ಬೈಯಿಸಿಕೊಳ್ಳಬೇಕಾಗುತ್ತೆ.
ಇದೇ ರೀತಿ ಬಸವಣ್ಣನವರ ಇತಿಹಾಸ ಕೂಡ ಹಾಗೇ ಇದೆ.
ಅವರು ಕೂಡಲಸಂಗಮಕ್ಕೆ ಬಂದಾಗ ಎನಾಯ್ತು.
ಇದನ್ನ ಕೂಡ ಚಿಂತನೆ ಮಾಡಬೇಕಿದೆ.
ಸಾವಿರಾರು ಜನ ಬಸವ ಅನುಯಾಯಿಗಳನ್ನ ಬಿಜ್ಜಳರು ಕೊಂದು ಹಾಕಿದ್ರೂ.
ಶಿವಾಜಿ ಮಹಾರಾಜರು ಒಂದೇ ಜಾತಿಗೆ ಸೀಮಿತವಾದವರು ಅಲ್ಲಾ.
ಅಂಬೇಡ್ಕರ್, ಬಸವಣ್ಣನವರ ಹಾಗೇ ಶಿವಾಜಿ ಅವರನ್ನು ನೋಡಬೇಕು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ