Breaking News

ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. :ಗೋವಿಂದ ಕಾರಜೋಳ

Spread the love

ಸಿಎಂ ಸಿದ್ದರಾಮಯ್ಯ ನಿನ್ನೆ ಕುಂಕುಮ ಹಚ್ಚಿಕೊಂಡು ಪ್ರೆಸ್ ಮೀಟ್ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. ಹಿಂದೆ ಕಾಶ್ಮೀರ ಮತ್ತು ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು. ಯಾಕೋ ನಿನ್ನೆ ಆಧಾರ ಕೇಳಿಲ್ಲ. ಅವರಲ್ಲಿ ದೇಶಾಭಿಮಾನವಿಲ್ಲ ಕೇವಲ ಓಟ್ ಬ್ಯಾಂಕ್ ಚಿಂತೆ ಮಾತ್ರ ಇದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕಾಶ್ಮೀರನಲ್ಲಿ ಉಗ್ರರ ದಾಳಿಯಾದ 15 ದಿನದೊಳಗಾಗಿ ಪ್ರತೀಕಾರ ಆಗಿದೆ. ಪಾಕಿಸ್ಥಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಈ ಸಂಭಂದ ಪ್ರಧಾನಿ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸ್ತೀ‌ನಿ. ಮೃತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಪ್ರಧಾನಿಗಳು ಇನ್ನು ಪಾಕಿಸ್ತಾನದ ವಿರುದ್ಧ ಅನೇಕ ವಿಚಾರ ಇರಿಸಿಕೊಂಡಿದ್ದಾರೆ. ಅವುಗಳೆಲ್ಲಾ ಯಶಸ್ವಿಯಾಗಲೆಂದು ಹಾರೈಸುತ್ತೇನೆ, ದೇವರಲ್ಲಿ ಪ್ರಾರ್ಥಿಸುತ್ತೇನೆ. ಸೋಫಿಯಾ ನಮ್ಮ ಬೆಳಗಾವಿ ಜಿಲ್ಲೆಯ ಸೊಸೆ ಅನ್ನೋದು ಹೆಮ್ಮೆ ಎಂದರು.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ಭ್ರಷ್ಟಾಚಾರ ಸಂಭಂದ ಬಸವರಾಜ್ ರಾಯರೆಡ್ಡಿ ಹೇಳಿಕೆ ಕೊಡುತ್ತಿರೋ ವಿಚಾರವಾಗಿ ರಾಯರೆಡ್ಡಿ ಅವರೇ ರಾಜ್ಯ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ. ವರ್ಗಾವಣೆ ದಂಧೆಗೆ ಕಡಿವಾಣಕ್ಕೆ ರಾಯರೆಡ್ಡಿ ಆಗ್ರಹಿಸ್ತಿದ್ದಾರೆ. ಆಡಳಿತ ಮಾಡ್ತಿರೋ ಕೈ ಸರ್ಕಾರದ ವಿರುದ್ದ ಸತ್ಯದ ಮಾತು ಹೇಳಿದ್ದಾರೆ. ಸಿದ್ದರಾಮಯ್ಯ ಸುಳ್ಳು ಹೇಳಿ ಸಿ ಎಂ ಆಗಿದ್ದಾರೆ. ಆಡಳಿತದ ಮೇಲೆ ದುಷ್ಪರಿಣಾಮ ಆಗಿದೆ ಎಂದು ರಾಯರೆಡ್ಡಿ ಹೇಳಿದರೂ ಸಿಎಂ ಬಾಯಿ ಬಿಡ್ತಿಲ್ಲ. ಬಿಜೆಪಿ ಮೇಲೆ ಗೂಬೆ ಕೂರಿಸ್ತಿದ್ದಾರೆ.ಬಿಜೆಪಿ ಮೇಲೆ ಆರೋಪ ಸಾಭೀತು ಮಾಡಿಲ್ಲ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೋರಬೇಕು ಎಂದರು.
ಸಿಎಂ ಸಿದ್ದರಾಮಯ್ಯ ನಿನ್ನೆ ಕುಂಕುಮ ಹಚ್ಚಿಕೊಂಡು ಪ್ರೆಸ್ ಮೀಟ್ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ. ಹಿಂದೆ ಕಾಶ್ಮೀರ & ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು. ಯಾಕೋ ನಿನ್ನೆ ಆಧಾರ ಕೇಳಿಲ್ಲ. ನಿನ್ನೆ ಆಧಾರ ಸಹಿತ ಬಿಡುಗಡೆ ಮಾಡಿದ್ದಾರೆ. ಓಟ್ ಬ್ಯಾಂಕ್ ಚಿಂತೆ ಮಾತ್ರ ಇದೆ, ದೇಶಾಭಿಮಾನ ಇಲ್ಲ. ಶಾಶ್ವತ ಪರಿಹಾರಕ್ಕೆ ಕಾಂಗ್ರೆಸ್ ನಿರ್ನಾಮ ಆಗಬೇಕು. ಇದನ್ನ ದೇಶದ ಜನ ಮಾಡಬೇಕು ಎಂದರು. 
ಒಳ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರ ಸರ್ವೆ ಕಾರ್ಯ ಮುಗಿಸಿ ಒಳಮೀಸಲಾತಿ ಜಾರಿ ಮಾಡಬೇಕು.ಜೂನ್ 10ರೊಳಗೆ ಮಾಡದಿದ್ರೆ ಅಸ್ಪೃಶ್ಯರೆಲ್ಲಾ ಸೇರಿ ಹೋರಾಟ ಮಾಡ್ತೇವೆ.ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಿಂದೂಗಳ ಮೇಲೆ ಹೆಚ್ಚು ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವಿದೆ. ರಾಜ್ಯದಲ್ಲಿರೋ ಕೈ ಸರ್ಕಾರದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಸರ್ಕಾರ ಮಾಡೋರು ಪ್ರತಿಭಟನೆ ಮಾಡ್ತಿದಾರೆ. ಅವರಿಗೆ ಕನಿಷ್ಠ ಜ್ಞಾನವೂ ಸಹ ಇಲ್ಲ. ಕೇಂದ್ರದ ವಿರುದ್ದ ಪ್ರತಿಭಟನೆ ಮಾಡ್ತಿದ್ದಾರೆ. ಹೀಗಾಗಿ ಯಾವುದು ಉಳಿದಿಲ್ಲ ಎಂದರು. 
ಇನ್ನು ನಾವು ರಾಜ್ಯದಲ್ಲಿ 19 ಜನ ಎನ್ ಡಿ ಎ ಸಂಸದರಿದ್ದೇವೆ. ಒಂದು ಸಮನ್ವಯ ಮಾಡಲಿಕ್ಕೆ ಸಮಿತಿ ಮಾಡಬೇಕಾದ ಅವಶ್ಯಕತೆ ಇದೆ. ಯುದ್ಧ ಸಂದರ್ಭ ಸೇರಿದಂತೆ ತುರ್ತು ವಿಷಯಗಳನ್ನ ಚರ್ಚೆ ಮಾಡಬೇಕು. ಇದರ ಜೊತೆ ಕೇಂದ್ರದ ಯೋಜನೆಗಳನ್ನ ಜನರಿಗೆ ತಿಳಿಸಲು ಸಮಿತಿ ಮಾಡಬೇಕಿದೆ. ದೇವೇಗೌಡರ ನೇತೃತ್ವದಲ್ಲಿ ಸಮಿತಿ ಆದ್ರೆ ಇನ್ನೂ ಅನುಕೂಲ & ಯೋಗ್ಯವಾಗ

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ