ಆಪರೇಷನ್ ಸಿಂಧೂರ್ ಮೂಲಕ ಪಾಕ್’ಗೆ ತಕ್ಕ ಉತ್ತರ…
ಬೆಳಗಾವಿಯಲ್ಲಿ ಬಿಜೆಪಿ ವಿಶೇಷ ಪೂಜೆ; ಸಿಹಿ ಹಂಚಿ ಸಂಭ್ರಮಾಚರಣೆ
ಸಿಂಧೂರ್’ವನ್ನು ಅಳಿಸಿದವರಿಗೆ ಸಿಂಧೂರ್’ನ ಶಕ್ತಿಯನ್ನು ತೋರಿದ ಭಾರತೀಯ ಸೇನೆ
ಪೆಹಲ್’ಗಾಮ್’ನಲ್ಲಿ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದ ಉಗ್ರರಿಗೆ ಭಾರತೀಯ ಸೇನೆಯೂ ತಕ್ಕ ಪಾಠ ಕಲಿಸಿದ ಹಿನ್ನೆಲೆ ಬೆಳಗಾವಿ ಬಿಜೆಪಿಯ ವತಿಯಿಂದ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಪೆಹಲ್’ಗಾಮ್’ನಲ್ಲಿ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದ ಉಗ್ರರಿಗೆ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ್’ನ ಮೂಲಕ ತಕ್ಕ ಪಾಠ ಕಲಿಸಿದೆ. ಈ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಬಿಜೆಪಿಯ ವತಿಯಿಂದ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ನಂತರ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ತಿನ್ನಿಸಿ, ಬೋಲೋ ಭಾರತ ಮಾತಾ ಕೀ ಜೈ ಎಂದು ಜಯಘೋಷಗಳನ್ನು ಕೂಗುತ್ತ, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. (ಫ್ಲೋ)
ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ್ ಅವರು ಪಿಎಂ ಮೋದಿ ಅವರು ಆಪರೇಷನ್ ಸಿಂಧೂರ್ ಮೂಲಕ ಅಟ್ಟಹಾಸ ಮೆರೆದ ಉಗ್ರರ 9 ನೆಲೆಗಳ ಮೇಲೆ ದಾಳಿ ನಡೆಸಿ ತಕ್ಕ ಪಾಠವನ್ನು ಕಲಿಸಿದ್ದಾರೆ.
ಅಂದು ಪೆಹಲ್’ಗಾಮ್’ನಲ್ಲಿ ಉಗ್ರರ ದಾಳಿಗೆ ಬಲಿಯಾದವರ ಆತ್ಮಕ್ಕೆ ಇಂದು ಶಾಂತಿ ಸಿಕ್ಕಂತಾಗಿದೆ ಎಂದರು.
ಪೆಹಲ್’ಗಾಮ್’ನಲ್ಲಿ ಅಟ್ಟಹಾಸ ಮೆರೆದ ಉಗ್ರರಿಗೆ ಭಾರತವು ಆಪ್’ರೇಷನ್ ಸಿಂಧೂರ್’ನ ಮೂಲಕ ತಕ್ಕ ಉತ್ತರವನ್ನು ನೀಡಿದೆ. ಬೆಳಗಾವಿಯ ಸೊಸೆಯಾದ ಕರ್ನಲ್ ಸೋಫಿಯಾ ಕುರೈಶಿ ಮತ್ತು ಕರ್ನಲ್ ರೋಮಿಕಾ ಸಿಂಗ್ ನೇತೃತ್ವದಲ್ಲಿ ಭಾರತವು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿದೆ. ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸುವ ಕಾರ್ಯ ಮಾಡಿದ ಉಗ್ರರಿಗೆ ಭಾರತೀಯ ಮಹಿಳಾ ಸೇನಾಧಿಕಾರಿಗಳು ಸಿಂಧೂರಿನ ತಾಕತ್ತನ್ನ ತೋರಿಸಿ ಕೊಟ್ಟಿದ್ದಾರೆಂದು ಬಿಜೆಪಿ ಮಹಿಳಾ ಪ್ರಮುಖರಾದ ಶಿಲ್ಪಾ ಕೇಕರೆ ಹೇಳಿದರು.
ಇನ್ನು ಮಾಜಿ ಸಂಸದೆ ಮಂಗಲ್ ಅಂಗಡಿಯವರು ಕೂಡ ಭಾರತೀಯ ಸೇನೆಯ ಕಾರ್ಯವನ್ನು ಪ್ರಶಂಸಿಸಿ ಪಿಎಂ ಮೋದಿ ಮತ್ತು ಭಾರತೀಯ ಸೇನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಮಹಾಪೌರರಾದ ವಾಣಿ ಜೋಷಿ, ಬಿಜೆಪಿ ನಗರಸೇವಕರಾದ ಹಣಮಂತ ಕೊಂಗಾಲಿ, ರಾಜಶೇಖರ್ ಢೋಣಿ, ಜಯತೀರ್ಥ ಸೌಂದತ್ತಿ, ಮತ್ತು ಪದಾಧಿಕಾರಿಗಳಾದ ಉಜ್ವಲಾ ಬಡವಣ್ಣಾಚೆ, ವಿಜಯ ಕೊಡಗಾನೂರ, ರವಿಕುಮಾರ ಪಾವಲೆ, ಲೀನಾ ಟೋಪಣ್ಣನವರ ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
Laxmi News 24×7