Breaking News

ಉಗಾರ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ ಜಾತ್ರೆ ನಿಮಿತ್ಯ ಪಲ್ಲಕ್ಕಿ ಮಹೋತ್ಸವ

Spread the love

ಉಗಾರ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ ಜಾತ್ರೆ ನಿಮಿತ್ಯ ಪಲ್ಲಕ್ಕಿ ಮಹೋತ್ಸವ
ಕಾಗವಾಡ ತಾಲೂಕಿನ ಉಗಾರ ಗ್ರಾಮ ದೇವತೆ ಶ್ರೀ ಲಕ್ಷ್ಮಿ ದೇವಿ ಜಾತ್ರೆಗೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡು ಜಾತ್ರೆಗೆ ಚಾಲನೆ ನೀಡಲಾಯಿತು ಮಂಗಳವಾರ ರಂದು ಶ್ರೀ ಲಕ್ಷ್ಮಿ ದೇವಿ ಮಂದಿರದಲ್ಲಿ ಜಾತ್ರಾ ಕಮಿಟಿ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ, ಉಪಾಧ್ಯಕ್ಷ ದಾದೋಬಾ ಥೋರುಷೆ ಮತ್ತು ಎಲ್ಲ ಕಮಿಟಿ ಸದಸ್ಯರು ಭಕ್ತರು ಒಂದುಗೂಡಿ ದೇವಿಗೆ ಪೂಜೆ ಅಭಿಷೇಕ ಸಲ್ಲಿಸಿ ಪಲ್ಲಕ್ಕಿ ಮೆರವಣಿಗೆ ಕೈಗೊಂಡರು.
ಗ್ರಾಮದ ಪ್ರಮುಖ ಮಾರ್ಗಗಳ ಮುಖಾಂತರ ಪಲ್ಲಕ್ಕಿಮೋತ್ಸವ ಕೈಗೊಂಡು ಕೃಷ್ಣಾ ನದಿಯವರೆಗೆ ಶೋಭಾ ಯಾತ್ರೆ ಹಮ್ಮಿಕೊಂಡಿದ್ದರು.ನದಿಗೆ ಪೂಜೆ ಆರತಿ, ಸಲ್ಲಿಸಿ ಅರ್ಚನೆ ಮಾಡುತ್ತಾ ಭಕ್ತಿಯಿಂದ ಲಕ್ಷ್ಮೀದೇವಿಗೆ ಚಾಂಗ ಭಲೋ ಎಂದು ಜೈಕಾರ ಕೂಗುತ್ತ ಶೋಭಾ ಯಾತ್ರೆ ಕೈಗೊಂಡರು. ಮಾರ್ಗದ್ದುದ್ದಕ್ಕೂ ಎಲ್ಲ ಮಹಿಳಾ ಸದ್ಭಕ್ತರು ರಂಗೋಲಿ ಬಿಡಿಸಿ. ದೇವಿಯ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.
ಮಂದಿರದಲ್ಲಿ ದೇವಿ ಮೂರ್ತಿಯ ಸ್ಥಾಪನೆ ಮಾಡಿ ಇವತ್ತು ರಾತ್ರಿ ಅನೇಕ ಸದ್ಭಕ್ತರು ದೀರ್ಘ ನಮಸ್ಕಾರ ಹಾಕುವ ಮುಖಾಂತರ ಭಕ್ತರು ಬೇಡಿಕೊಂಡಿರುವ ಹರಕೆಗಳು ತೀರಿಸಿಕೊಳ್ಳುತ್ತಾರೆ. ಬುಧವಾರ ರಂದು ಬೆಳಗ್ಗೆಯಿಂದ ದೇವಿಗೆ ಮಹಾಪೂಜೆ ನೈವೇದ್ಯ ಕಾರ್ಯಕ್ರಮ ಜರಗಲಿದೆ.
ಪಲ್ಲಕ್ಕಿ ಮೋಸವ ಯಶಸ್ವಿಗೊಳಿಸಲು ಲಕ್ಷ್ಮೀದೇವಿ ಟ್ರಸ್ಟ್ ಸಮಿತಿ ಅಧ್ಯಕ್ಷ ಶಾಸಕ ರಾಜು ಕಾಗೆ, ಉಪಾಧ್ಯಕ್ಷ ದಾದೋಬಾ ದೂರುಷೆ, ಬಾಳಾಸಾಹೇಬ ವೀಸಾಪುರೆ,ರೋಹನ ನಾಯ್ಕ್ ,ಬಾಲಕೃಷ್ಣ ಪಾಟೀಲ, ದೀಪಕ ಪಾಟೀಲ, ದಿಲೀಪ ಹುಲ್ಲೋಳಿ, ಸುರೇಶ ವಾಘಮೂಡೆ, ಬಾಳು ನಾಯ್ಕ್, ವಿನಾಯಕ ಕಾಂಬಳೆ, ಪೂಪಟ ಜಗತಾಪ, ಪ್ರಫುಲ ಥೂರುಷ, ಮಹದೇವ ವಡಗಾಂವೆ, ಮನೋಜ ಸುತಾರ, ಅರ್ಚಕ ಅಮರ ಗುರವ, ರಾಜು ಗುರವ, ಉದಯ ಪಾಟೀಲ, ರಾಕೇಶ ಪಾಟೀಲ, ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಮಹಿಳಾ ಭಕ್ತರು ಪಾಲ್ಗೊಂಡಿದ್ದರು.
ಕಳೆದ ಅನೇಕ ವರ್ಷಗಳ ಬಳಿಕ ಮೇ ತಿಂಗಳಿನ ಬಿರು ಬಿಸಿಲಿನಲ್ಲಿಯೂ ಈ ವರ್ಷ ಪ್ರಥಮ ಬಾರಿಗೆ ನೀರು ತುಂಬಿದೆ. ಅನೇಕ ವರ್ಷಗಳಿಂದ ಮಹಿಳಾ ಭಕ್ತರಿಗೆ ಸ್ನಾನ ಮಾಡಿ ದೀರ್ಘ ದಂಡ ನಮಸ್ಕಾರ ಹಾಕಲು ನೀರಿನ ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ವರ್ಷ ನದಿಯಲ್ಲಿ ನೀರು ತುಂಬಿದ್ದರಿಂದ ಭಕ್ತರಲ್ಲಿ ಸಂತಸ ವ್ಯಕ್ತವಾಯಿತು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ