Breaking News

ಧಾರವಾಡದ ಯಾದವಾಡದಲ್ಲಿ ಸಂಭ್ರಮದ ಹೊನ್ನಾಟ….21 ವರ್ಷದ ನಂತರ ಗ್ರಾಮ ದೇವಿಯರ ಜಾತ್ರೆ

Spread the love

ಧಾರವಾಡದ ಯಾದವಾಡದಲ್ಲಿ ಸಂಭ್ರಮದ ಹೊನ್ನಾಟ….21 ವರ್ಷದ ನಂತರ ಗ್ರಾಮ ದೇವಿಯರ ಜಾತ್ರೆ
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ 21 ವರ್ಷಗಳ ನಂತರ ಗ್ರಾಮ ದೇವಿಯರ ಜಾತ್ರೆ ಅದ್ಧೂರಿಯಿಂದ ನೆರವೇರುತ್ತಿದ್ದು, ಗ್ರಾಮಸ್ಥರೆಲ್ಲರೂ ಗ್ರಾಮ ದೇವತೆಯರ ಜಾತ್ರೆಯಲ್ಲಿ ಭಾಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಳ್ಳುವುದರ ಜತೆಗೆ ದೇವರ ಕೃಪೆಗೆ ಪಾತ್ರರಾದರು. ‌
ಗ್ರಾಮದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಮೂರ್ತಿಗಳು ಪುರಪ್ರವೇಶ ಮಾಡಿದ್ದು, ಶನಿವಾರ ಗ್ರಾಮದ ತುಂಬೆಲ್ಲ ಸಂಭ್ರಮದ ಹೊನ್ನಾಟ ನಡೆಯುತ್ತಿದೆ. ಶನಿವಾರ ಯಾದವಾಡ ಗ್ರಾಮದ ಪ್ರಮುಖ ಏರಿಯಾಗಳಲ್ಲಿ ಗ್ರಾಮ ದೇವಿಯರ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಗಲ್ಲಿ ಗಲ್ಲಿಯಲ್ಲೂ ಗ್ರಾಮಸ್ಥರು ಬಂಡಾರ ಎರಚಿ ಹೊನ್ನಾಟ ಆಡಿದರು. ಈ ಜಾತ್ರಾ ಮಹೋತ್ಸವಕ್ಕಾಗಿಯೇ ಕ್ವಿಂಟಾಲ್‌ಗಟ್ಟಲೇ ಬಂಡಾರ ತರಲಾಗಿದೆ.
ಯಾದವಾಡ ಗ್ರಾಮಸ್ಥರು ಶನಿವಾರವಂತೂ ಅಕ್ಷರಶಃ ಬಂಡಾರದಲ್ಲಿ ಮಿಂದೆದ್ದಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಸ್ಥರಿಗೆ ಪ್ರಸಾದದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವ ಯಾದವಾಡ ಗ್ರಾಮ ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದೆ.

Spread the love

About Laxminews 24x7

Check Also

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ

Spread the love ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ