ಖಾನಾಪೂರ ತಾಲೂಕಾ ರೇಷನ್ ಅಂಗಡಿ ಯೂನಿಯನ್ ಅಧ್ಯಕ್ಷರಾದ ಮಹಾದೇವ ದಳವಿ ತಮ್ಮ ಸ್ಥಾನಕ್ಕೆ ರಾಜಿನಾಮೆ
ಖಾನಾಪೂರ ತಾಲೂಕಿನಲ್ಲಿ ಇತ್ತಿಚೆಗೆ ಬಹು ಚರ್ಚಿತ ಪಡಿತರ ರೇಷನ್ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಖಾನಾಪೂರ ಬ್ಲಾಕ್ ಕಾಂಗ್ರೆಸ್ ಕಮಿಟಿ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ಪತ್ರಿಕಾಗೋಷ್ಠಿ ನಡೆಸಿತು.
ಖಾನಾಪೂರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಮತ್ತು ಖಾನಾಪೂರ ರೇಷನ್ ಅಂಗಡಿ ಯೂನಿಯನ್ ಅಧ್ಯಕ್ಷರ ಮೇಲೆ ನೇರವಾಗಿ ಆರೋಪ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಅದರಂತೆಯೇ ಈಗಾಗಲೇ ಶಿರಸ್ತೇದಾರ್ ಮೆಹಬುಬಿ ನದಾಫ ಅವರನ್ನು ಧಿರ್ಘರಜೆಗೆ ಕಳುಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಅದರಂತೆಯೇ ಯೂನಿಯನ್ ಅಧ್ಯಕ್ಷರಾದ ಮಹಾದೇವ ದಳವಿ ಅವರು ಏಜೆಂಟರ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಇವರ ಕಡೆಗೆ ಐದು ಮೊಬೈಲ್ ರೇಷನ್ ವಿತರಣಾ ಕೇಂದ್ರಗಳಿದ್ದು, ಇವರೇ ಇದರ ಉಸ್ತುವಾರಿ ಈ ಕೇಂದ್ರದ ಜವಾಬ್ದಾರಿ ಇವರ ಕಡೆ ಏಕೆ?
ಈ ಎಲ್ಲ ರೇಷನ್ ವಿತರಣೆ ಕೇಂದ್ರಗಳನ್ನು ಇಟ್ಟುಕೊಂಡು ಇವರು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಾಂತೇಶ ರಾಹುತ್ ಮತ್ತು ಈಶ್ವರ್ ಘಾಡಿ ಅವರು ಮಾಡಿದರು ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಮೇಲೆ ಆರೋಪ ಬರುತ್ತಿದ್ದಂತೆಯೇ ತಾಲೂಕಾ ರೇಷನ್ ಅಂಗಡಿ ಮಾಲೀಕರ ಸಂಘ ದ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜಿನಾಮೆ ನೀಡಿದ್ದಾರೆ ತಮ್ಮ ರಾಜಿನಾಮೆ ಪತ್ರವನ್ನು ಕರ್ನಾಟಕ ರಾಜ್ಯ ರೇಷನ್ ಯೂನಿಯನ್ ಉಪಾಧ್ಯಕ್ಷ ಚಂಬಣ್ಣ ಹೊಸಮನಿ ಅವರ ಕಡೆ ನೀಡಿದರು ಈ ಸಂದರ್ಭದಲ್ಲಿ ಯೂನಿಯನ್ ದ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದರಿಂದ ರೇಷನ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ನಡೆಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಬ್ಲಾಕ್ ಕಾಂಗ್ರೆಸ್ ಗೆ ಜಯ ದೊರೆತಂತಾಗಿದ್ದು ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾನೂನು ಕ್ರಮಕ್ಕೆ ಆಗ್ರಹ ಮಾಡಲಾಗಿದ್ದು ಖಾನಾಪೂರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೇಲೆ ಇನ್ನೂ ಯಾವ ರೀತಿಯ ಕ್ರಮ ಜರುಗಿಸಲಾಗುವುದು ಎಂದು ಕಾದು ನೋಡಬೇಕಿದೆ.
Laxmi News 24×7