Breaking News

ಬಿಜೆಪಿಗರನ್ನು ನೋಡಿ ದೇಶ ಭಕ್ತಿ ಕಲಿಯುವ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ…

Spread the love

ಬಿಜೆಪಿಗರನ್ನು ನೋಡಿ ದೇಶ ಭಕ್ತಿ ಕಲಿಯುವ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ…
ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರಲ್ಲ; ಸಚಿವ ಶಿವರಾಜ್ ತಂಗಡಗಿ
ದೇಶ ಭಕ್ತಿಯನ್ನು ಬಿಜೆಪಿಗರನ್ನ ನೋಡಿ ಕಲಿಯುವ ಯಾವ ಅವಶ್ಯಕತೆನೂ ಕಾಂಗ್ರೆಸ್’ಗೆ ಇಲ್ಲ. ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರ ಪಾತ್ರನೂ ಇಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಇಂದು ಬಾಗಲಕೋಟೆಯಲ್ಲಿ ಅವರು ಮಾತನಾಡಿದರು. ಪಾಕ್ ವಿರುದ್ಧ ಯುದ್ಧ ಘೋಷಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ದೇಶ ವಿರೋಧಿಗಳಲ್ಲ, ನಾವು ದೇಶ ಭಕ್ತರು.ದೇಶದ ಭಕ್ತಿ ವಿಚಾರದಲ್ಲಿ ಬಿಜೆಪಿಗರಿಂದ ಕಲಿಯಿವ ಅವಶ್ಯಕತೆ ನಮಗಿಲ್ಲ.ಈ ದೇಶವನ್ನ ಅತಿ ಹೆಚ್ಚು ಆಳಿದವರು ಕಾಂಗ್ರೆಸ್ ನವರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್ ನವರು. ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರ ಪಾತ್ರನೂ ಇಲ್ಲ.
ಯುದ್ಧ ಮಾಡ್ತಿವಿ ಅಂದ್ರೆ,ದೇಶದ ವಿಚಾರದಲ್ಲಿ ನಾವು ಯಾವಾಗಲೂ ದೇಶದ ಭಕ್ತರೆ.26 ಜನ ಅಮಾಯಕರನ್ನ ಗುಂಡಿಟ್ಟು ಕೊಂದ ಹೊತ್ತಲ್ಲಿ ವಿಪಕ್ಷಗಳ ಸಭೆ ಕರೆದು,ಈ ದೇಶದ ಪಿಎಂ ಬಿಹಾರ ಚುನಾವಣಾ ಪ್ರಚಾರಕ್ಕೆ ಹೋಗ್ತಾರೆ.ಪಿಎಂ ಅವರದ್ದು ಇದು ಮಾನವಿಯತೆನಾ? ಇದು ಬಿಜೆಪಿ ದೇಶ ಭಕ್ತಿನಾ?. 26 ಜನ ಅಮಾಯಕರು ಸತ್ತಾಗ,ಅವ್ರ ಬಗ್ಗೆ,ಈ ದೇಶದ ಚಿಂತೆ ಮಾಡೋದು ಬಿಟ್ಟು.ಬಿಜೆಪಿಗರಿಗೆ ಬಿಹಾರ ಚುನಾವಣೆ ಬಹಳ ಮುಖ್ಯ ಆಗಿದೆ..
ಇದನ್ನ ಕಾಂಗ್ರೆಸ್ ನವರು ಪ್ರಶ್ನೆ ಮಾಡಿದ್ರೆ, ನಾವೆಲ್ಲರೂ ದೇಶ ಭಕ್ತರೇ ಅಲ್ಲ. ದೇಶ ಭಕ್ತಿ ವಿಚಾರದಲ್ಲಿ ಬಿಜೆಪಿಗರನ್ನ ನೋಡಿ ಕಲಿಯುವ ಯಾವ ಅವಶ್ಯಕತೆನೂ ಕಾಂಗ್ರೆಸ್ ಗೆ ಇಲ್ಲ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ