Breaking News

ಬಸವಣ್ಣನವರ ಕಾರ್ಯಕ್ರಮಕ್ಕಿಂತ ಸಚಿವರು, ಶಾಸಕರಿಗೆ ಸಿಎಂ ಕಾರ್ಯಕ್ರಮವೇ ಮುಖ್ಯ..

Spread the love

ಬಾಗಲಕೋಟೆ:ಬಸವಣ್ಣನವರ ಕಾರ್ಯಕ್ರಮಕ್ಕಿಂತ ಸಚಿವರು, ಶಾಸಕರಿಗೆ ಸಿಎಂ ಕಾರ್ಯಕ್ರಮವೇ ಮುಖ್ಯ..
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಏ. 29 30ರಂದು ನಡೆಯುವ ಬಸವ ವೈಭವ ಕಾರ್ಯಕ್ರಮದ ಸ್ಥಳವನ್ನು ಸಚಿವರಾದ ಶಿವರಾಜ್ ತಂಗಡಗಿ, ಆರ್. ಬಿ. ತಿಮ್ಮಾಪುರ್ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಪರಿಶೀಲಿಸಿದರು.
ಕೂಡಲಸಂಗಮದಲ್ಲಿ ಬಸಣವಣ್ಣನಿಗಾಗಿ ಸಿದ್ಧವಾಯ್ತು ಸರ್ವ ಧರ್ಮ ಸಂಸತ್ತು ಕಾರ್ಯಕ್ರಮ.
ಆದ್ರೆ ಆ ಕಾರ್ಯಕ್ರಮಕ್ಕಿಂತ ಸಿಎಂ ಕಾರ್ಯಕ್ರಮವೇ ಇಂಪಾರ್ಟೆಂಟ್ ಎಂದ ಶಾಸಕ ಕಾಶಪ್ಪನವರ್ ಬಸವ ವೈಭವ ಕಾರ್ಯಕ್ರಮದ ಪೂರ್ವಭಾವಿ ಸಭೆ ಬಳಿಕ ಕಾರ್ಯಕ್ರಮ ಸ್ಥಳ ಪರಿಶೀಲನೆ ವೇಳೆ ಶಾಸಕ ಕಾಶಪ್ಪನವರ್ ಸಚಿವರುಗಳ ಮುಂದೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ದಿನ ಕಾರ್ಯಕ್ರಮಕ್ಕೆ ಜನ ಬರಬೇಕು ಎಂದ ಸಚಿವ ತಿಮ್ಮಾಪೂರ ಮತ್ತು ತಂಗಡಗಿ ಹೇಳಿದರು. ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಕಾಶಪ್ಪನವರ,ನಮಗೆ ವಚನ ಗೋಷ್ಠಿಗಿಂತ ಸಿಎಂ ಕಾರ್ಯಕ್ರಮ ಇಂಪಾರ್ಟೆಂಟ್
ಸಿಎಂ ಕಾರ್ಯಕ್ರಮಕ್ಕೆ ಜನರನ್ನ ಕೂಡಿಸ್ತೇವೆ ಎಂದರು.
ಆ ಮೂಲಕ ಸಾಂಸ್ಕೃತಿಕ ನಾಯಕ ಬಸವಣ್ಣನ ವಚನಗೋಷ್ಠಿ ಕಡಗಣಿಸಿದ್ರಾ ಜನಪ್ರತಿನಿದಿಗಳು ಎಂಬ ಸಂಶಯಗಳು ಮೂಡುತ್ತಿವೆ. ಯಾವ ಪುರುಷಾರ್ಥಕ್ಕೆ ಬಸವ ವೈಭವ ಕಾರ್ಯಕ್ರಮ ಆಯೋಜನೆ ಮಾಡಬೇಕು. ಬಸವಣ್ಣನ ಹೆಸರ ಮೇಲೆ ಜನಪ್ರತಿಗಳು ರಾಜಕಾರಣ ಮಾಡುತ್ತಾರೆ. ಸಿಎಂ ಮುಂದೆ ಓಡಾಡಿ ಸೈ ಅನಿಸಿಕೊಳ್ಳಲು ಕಾರ್ಯಕ್ರಮ ಮಾಡ್ತಿದ್ದಾರಾ ಅನಿಸುತ್ತಿದೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ