Breaking News

ನೇಹಾ ಹಿರೇಮಠ ಕೊಲೆ ಪ್ರಕರಣ ಟ್ರಯಲ್ ಗೆ ಕಾಲ ಕೂಡಿ ಬಂದಿದೆ.

Spread the love

ಹುಬ್ಬಳ್ಳಿ, (ಏಪ್ರಿಲ್ 28):  ಹುಬ್ಬಳ್ಳಿಯ (Hubballi) ಬಿವ್ಹಿಬಿ‌ ಕಾಲೇಜಿನಲ್ಲಿ 2024 ಎಪ್ರಿಲ್ 18 ರಂದು ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ (Neha Hiremath murder case)  ಟ್ರಯಲ್ ಗೆ ಈಗ ಕಾಲ ಕೂಡಿ ಬಂದಿದೆ.‌ ಸಿಐಡಿಯಿಂದ (CID) ನೇಮಕವಾದ ವಕೀಲರಿಂದ ನೇಹಾ ಹಿರೇಮಠ ಪರವಾಗಿ ವಾದ ಮಂಡನೆ ಮಾಡಲಿದ್ದು, ಆರೋಪಿ ಫೈಯಾಜ್ ಪರವಾಗಿ ಹುಬ್ಬಳ್ಳಿಯ ಯಾವುದೇ ವಕೀಲರು ಕೇಸ್ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಹುಬ್ಬಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ವಕೀಲರ ನೇಮಕ ಮಾಡಲಾಗಿದೆ. ಆರೋಪಿ ಫೈಯಾಜ್ ಸೂಚಿಸುವ ವಕೀಲರನ್ನು ನೇಮಕ ಮಾಡಲಿದೆ. ಇನ್ನೊಂದಡೆ ಬೆಂಗಳೂರು ಮೂಲದ ವಕೀಲರೊಬ್ಬರು ವಕಾಲತ್ತು ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಬೆಳಗಾವಿ ಕೋರ್ಟ್​ಗೆ ವರ್ಗಾವಣೆ ಮಾಡುವಂತೆ ಮನವಿ ಸಂಬಂಧ ಆರೋಪಿ ಫೈಯಾಜ್ ಗೆ ಆರಂಭಿಕ ಹಿನ್ನಡೆಯಾಗಿದೆ.

 

ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣ: ವಿಚಾರಣೆಗೆ ಕೊನೆಗೂ ಕೂಡಿ ಬಂತು ಕಾಲ!

ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಮನವಿ ಮಾಡಿದ್ದ. ಧಾರವಾಡ ಹೈಕೋರ್ಟ್ ನಲ್ಲಿ ಇಂದು ನಡೆದ ಪ್ರಕರಣ ವರ್ಗಾವಣೆ ವಿಚಾರಣೆಯಲ್ಲಿ‌ ವಕೀಲರಾದ ಝೆಡ್.ಆರ್.ಮುಲ್ಲಾ, ಹತ್ಯೆಯ ಆರೋಪಿ ಪರವಾಗಿ ವಾದ ಮಂಡನೆ ಮಾಡಿದ್ದರು. ಎರಡು ಕಡೆ ವಾದ ಆಲಿಸಿ ಹುಬ್ಬಳ್ಳಿಯ ಒಂದನೇ ಅಧೀನ ಜಿಲ್ಲಾ ನ್ಯಾಯಾಲಯದಲ್ಲಿಯೇ ವಿಚಾರಣೆ ಆರಂಭಿಸುವಂತೆ ಹೈಕೋರ್ಟ್ ತೀರ್ಪು ನೀಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ