Breaking News

ನೀರಿಲ್ಲಂತ ಮನೀಗೆ ಬೀಗರು ಬರುತ್ತಿಲ್ಲರಿ,

Spread the love

ಗದಗ, ಏಪ್ರಿಲ್​ 27: ಗದಗ-ಬೆಟಗೇರಿ (Gadag-Betageri) ಅವಳಿ ನಗರದಲ್ಲಿ ನೀರಿಗಾಗಿ (Water) ಹಾಹಾಕರ ಶುರುವಾಗಿದೆ. ಎರಡು ತಿಂಗಳಿಂದ ನಗರಸಭೆ ಹನಿ ನೀರು ಪೂರೈಕೆ ಮಾಡಿಲ್ಲ. ಹೀಗಾಗಿ, ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇಕಡಾ 100ರಷ್ಟು ಟ್ಯಾಕ್ಸ್ ತುಂಬುತ್ತೇವೆ. ಆದರೆ, ನಮಗೇಕೆ ನೀರು ಕೊಡಲ್ಲ ಅಂತ ನಗರಸಭೆಯನ್ನು ಮಹಿಳೆಯರು ಪ್ರಶ್ನೆ ಮಾಡಿದ್ದಾರೆ. ಶಾಸಕರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಬಿರು ಬೇಸಿಗೆ ನೆತ್ತಿ ಸುಡುತ್ತಿದೆ. ಉರಿ ಬಿಸಿಲಿಗೆ ಗಂಟಲು ಒಣಗುತ್ತಿದೆ. ಆದರೆ, ಅವಳಿ ನಗರದಲ್ಲಿ ಹನಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಎರಡು ತಿಂಗಳಾದರೂ ಹನಿ ನೀರು ಪೂರೈಕೆ ಮಾಡದ ಜಿಲ್ಲಾಡಳಿತ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗನ ಹುಡ್ಕೋ ಕಾಲೋನಿ ನಿವಾಸಿಗಳಿಗೆ ಎರಡು ತಿಂಗಳಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಹೀಗಾಗಿ, ನಗರಸಭೆ ಕಚೇರಿಗೆ ಹತ್ತಾರು ಬಾರಿ ಅಲೆದಾಡಿ ಮನವಿ ನೀಡಿದರೂ ಡೋಂಟ್ ಕೇರ್ ಅಧಿಕಾರಿಗಳು ಮಾತ್ರ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ, ಕ್ಷೇತ್ರದ ಶಾಸಕ ಹೆಚ್ ಕೆ ಪಾಟೀಲ್, ವಾರ್ಡ್ ಸದಸ್ಯೆ ಉಷಾ ದಾಸರ್ ಗಮನಕ್ಕೂ ತಂದಿದ್ದಾರೆ. ಆದರೂ ಎರಡು ತಿಂಗಳಾದರೂ ಹನಿ ನೀರು ಪೂರೈಕೆ ಆಗಿಲ್ಲ. ಹುಲಕೋಟಿ ಗ್ರಾಮಕ್ಕೆ ನೀರು ಕೊಡ್ತೀರಿ ಆದರೆ, ಗದಗ-ಬೆಟಗೇರಿ ಅವಳಿ ನಗರಕ್ಕೆ ಏಕೆ ನೀರು ಕೊಡಲ್ಲ ಅಂತ ಮಹಿಳೆಯರು ಕ್ಷೇತ್ರದ ಶಾಸಕ ಹೆಚ್ ಕೆ ಪಾಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.ನೀರು ಕೊಡದಿದ್ದರೆ ನಗರಸಭೆ ಹಾಗೂ ಡಿಸಿ ಕಚೇರಿ ಎದುರು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಗದಗ ನಗರದ ಹುಡ್ಕೋ ನಿವಾಸಿಗಳು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ. ಗದಗನಲ್ಲಿ ನೀರು ಸಿಗಲ್ಲ ಅಂತ ಕನ್ಯೆ ಕೊಡುತ್ತಿಲ್ಲ. ಬೀಗರು, ಸಂಬಂಧಿಕರು ಮನೆಗೆ ಬರುತ್ತಿಲ್ಲ. ನಮ್ಮ ತಂದೆ, ತಾಯಿ ನಮಗೆ ಫೋನ್ ಮಾಡಿದ್ರೆ ಆರಾಮವಾಗಿ ಇದ್ದೀರಿ ಅಂತ ಕೇಳಲ್ಲ, ನೀರು ಬಿಟ್ಟಾರ ಅಂತ ಕೇಳುತ್ತಾರೆ. ಇಂಥ ಕೆಟ್ಟ ಪರಿಸ್ಥಿತಿ ಗದಗ-ಬೆಟಗೇರಿ ಅವಳಿ ನಗರದಲ್ಲಿದೆ ಎಂದು ಹುಡ್ಕೋ ನಗರ ನಿವಾಸಿ ವೀಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ