Breaking News

ಬೇಸಿಗೆಯಿಂದ ತತ್ತರಿಸಿದ ಪ್ರಯಾಣಿಕರನ್ನು ಕೂಲ್ ಮಾಡಿದ ಜೈನ್ ಹರೀಟೇಜ್ ಶಾಲೆಯ ಮಕ್ಕಳು ಇದು ಮೇ ತಿಂಗಳು ಬೇಸಿಗೆಯ ಬಿಸಿಲಿಗೆ ಜನ ತತ್ತರಿಸುತ್ತಿದ್ದಾರೆ.

Spread the love

ಬೇಸಿಗೆಯಿಂದ ತತ್ತರಿಸಿದ ಪ್ರಯಾಣಿಕರನ್ನು ಕೂಲ್ ಮಾಡಿದ ಜೈನ್ ಹರೀಟೇಜ್ ಶಾಲೆಯ ಮಕ್ಕಳು
ಇದು ಮೇ ತಿಂಗಳು ಬೇಸಿಗೆಯ ಬಿಸಿಲಿಗೆ ಜನ ತತ್ತರಿಸುತ್ತಿದ್ದಾರೆ.
ಮನೆಯಿಂದ ಹೊರಗಡೆ ಬಂದರೆ ನೆರಳು ಎಲ್ಲಿದೆ…. ಕುಡಿಯಲು ನೀರು ಇದೆಯಾ ಎಂದು ಹುಡುಕುವಷ್ಟು ಬೇಸಿಗೆಯ ತಾಪವಿದೆ. ಇಂಥ ಸಂದರ್ಭದಲ್ಲಿ ನಾವು ಇರುವಲ್ಲಿಯೇ ತಣ್ಣನೆಯ ಜೂನ್ ಕೊಟ್ಟರೆ ಮನಸ್ಸಿಗೆ ಹಾಗೂ ದೇಹಕ್ಕೆ ಎಷ್ಟು ಮುದನೀಡುತ್ತದೆ ಅಲ್ಲವೆ.
ಹೌದು ಸ್ಕೌಟ್ ಗೌಡ್ಸ್ ಧಿರಿಸು ತೊಟ್ಟ ಮಕ್ಕಳು, ಕೈಯ್ಯಲ್ಲೊಂದು ಗ್ಲಾಸು ಹಿಡಿದು ಅಂಕಲ್ ನಿಮಗೆ ಜ್ಯೂಸ್ ಬೇಕಾ…ಅಂಟಿ ನಿಮಗೆ ಟ್ಯೂನ್ ಬೇಕಾ…ತಾತಾ ನಿಮಗೆ ಜ್ಯೂಸ್ ಬೇಕಾ ಎಂದು ಬಿಸಿಲಿನಿಂದ ಬಾಯಾರಿದ ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ
ಪ್ರಯಾಣಿಕರಿಗೆ ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಜ್ಯೂಸ್ ಕೊಟ್ಟು ಪ್ರಯಾಣಿಕರ ಬೇಸಿಗೆಯ ದಣಿವನ್ನು ನೀಗಿಸಿದ್ದಾರೆ.
ಶುಕ್ರವಾರ ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಜೈನ್ ಹೆರಿಟೇಜ್ ಶಾಲೆಯ ಬ್ಯಾಟ್ಸ್ ಗೈಡ್ಸ್‌ಗೆ ಶಿಕ್ಷಕರಾದ ಪಲ್ಲವಿ ನಾಡಕರ್ಣಿ ಹಾಗೂ ಶಿಕ್ಷಕಿ ಕಲ್ಪನಾ ಅವರ ಮಾರ್ಗದರ್ಶನದಲ್ಲಿ ಜೈನ್ ಹರಿಟೇಜ್ ಶಾಲೆಯ ಬ್ಯಾಟ್ಸ್ ಗೈಡ್ಸ್‌ ವಿದ್ಯಾರ್ಥಿಗಳು ಬಿಸಿಲಿನಿಂದ ದಣಿದು ಬಾಯಾರಿದ ಮಕ್ಕಳಿಗೆ ನೀರು ಹಾಗೂ ಜ್ಯೂಸ್ ವಿತರಿಸಿದರು.
ಇನ್ನು ವಿದ್ಯಾರ್ಥಿಗಳಿಂದ ನೀರು ಹಾಗೂ ಜ್ಯೂನ್‌ ಪಡೆದ ಪ್ರಯಾಣಿಕರು ಮಕ್ಕಳಿಗೆ ಶುಭ ಕೋರಿದರು. ವಿದ್ಯಾರ್ಥಿಗಳ ಈ ಕಾರ್ಯವನ್ನು ಕಂಡ ಜನರು ಅವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಕವರು ಭಾಗಿಯಾಗಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ