ಬೆಳಗಾವಿ ಡಿಸಿಸಿ ಅಖಾಡಕ್ಕೆ ಖಾನಾಪುರದಿಂದ ಮಾಜಿ ಶಾಸಕಿ ಡಾ. ಅಂಜಲಿತಾಯಿ ನಿಂಬಾಳ್ಕರ್ ತಯಾರಿ
ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರುವ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್
ಖಾನಾಪೂರ ತಾಲೂಕಿನ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಮುಂಬರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ.
ಈ ಕುರಿತು ನಿನ್ನೆ ಅಷ್ಟೇ ಜರುಗಿದ ಖಾನಾಪೂರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಾವು ಸ್ಪರ್ಧಿಸುವುದಾಗಿ ಹೇಳಿ ಕಾರ್ಯಕರ್ತರು ಈ ಕುರಿತು ತಯಾರಿ ನಡೆಸಿ ಎಂದು ಕೇಳಿದ್ರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿಂದ ಪರಾಜಿತ ಗೊಂಡಿರುವ ಅವರು ಈ ಬಾರಿ ಮತ್ತೆ ಈ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಧುಮುಕುವ ಮೂಲಕ ಖಾನಾಪೂರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶದಲ್ಲಿರುವ ಇನ್ನಿತರ ಪ್ರಮುಖ ಮುಖಂಡರಿಗೆ ನಾನು ಮತ್ತೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ ಇರುವ ಸಂದೇಶವನ್ನು ತಮ್ಮ ಕಾರ್ಯಕರ್ತ ಮೂಲಕ ಕರೆಯಲಾಗಿದ ಸಭೆಯಿಂದ ಸಂದೇಶ ನೀಡಿದ್ದಾರೆ.
ಒಟ್ಟಿನಲ್ಲಿ ಖಾನಾಪೂರ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಮುಖಂಡರ ನಡುವೆ ರಾಜಕೀಯ ಸಂಘರ್ಷ ಉದ್ಭವಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
Laxmi News 24×7