Breaking News

ಹಾವೇರಿ: ವಂದೇ ಭಾರತ್​ ರೈಲು ಟಿಕೆಟ್​ ಬುಕ್ಕಿಂಗ್‌ಗೆ ಪ್ರಯಾಣಿಕರ ಪರದಾಟ

Spread the love

ಹಾವೇರಿ: ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಕೇಂದ್ರ ಸಚಿವ ಸೋಮಣ್ಣ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸಿದ್ದು, ಆರಂಭದಲ್ಲೇ ಟಿಕೆಟ್​ ಬುಕ್ಕಿಂಗ್​ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಹಾವೇರಿಗೆ ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಆಗುತ್ತಿಲ್ಲ. ಹಾವೇರಿಯಲ್ಲಿ ರೈಲು ನಿಲುಗಡೆ ಇದ್ದರೂ, ಹತ್ತಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಮತ್ತೊಂದೆಡೆ, ಬೆಂಗಳೂರಿನ ಕೆಆರ್​ಎಸ್ ರೈಲು ನಿಲ್ದಾಣದಿಂದ ಹಾವೇರಿಗೂ ಟಿಕೆಟ್​ ಬುಕ್ಕಿಂಗ್​ ಆಗುತ್ತಿಲ್ಲ. ಬದಲಾಗಿ, ಯಶವಂತಪುರದಿಂದ ಹಾವೇರಿಗೆ ಟಿಕೆಟ್​ ಬುಕ್ಕಿಂಗ್​ ಆಗುತ್ತಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಮಾತ್ರವಲ್ಲ, ಈ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಒಂದು ದಿನ ಮುಂಚಿತವಾಗಿ ಇಲ್ಲವೇ ಕೆಲ ಗಂಟೆಗಳ ಮುಂಚಿತವಾಗಿ ಟಿಕೆಟ್ ಪಡೆಯಬೇಕಾಗುತ್ತೆ. ಇದರಲ್ಲಿ ಸ್ವಲ್ಪ ರಿಯಾಯಿತಿ ನೀಡಿದರೆ ಅನುಕೂಲವಾಗುತ್ತದೆ ಎಂಬುದು ಪ್ರಯಾಣಿಕರ ಮನವಿ.

ವಂದೇ ಭಾರತ್​ ರೈಲು ಹಾವೇರಿಯಲ್ಲಿ ಪ್ರಾಯೋಗಿಕವಾಗಿ ಮೂರು ತಿಂಗಳ ಕಾಲ ನಿಲುಗಡೆಯಾಗಲಿದೆ. ರೈಲ್ವೆ ಇಲಾಖೆಯ ಮಾನದಂಡಗಳಂತೆ ನಿಗದಿ ಮಾಡಿದಷ್ಟು ಪ್ರಯಾಣಿಕರು ಸಂಚರಿಸಿದರೆ ಮಾತ್ರ ರೈಲು ಹಾವೇರಿಯಲ್ಲಿ ಖಾಯಂ ನಿಲುಗಡೆಯಾಗಲಿದೆ.

ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸುವ ರೈಲು ಬೆಳಗ್ಗೆ 10.04ಕ್ಕೆ ಹಾವೇರಿಯಲ್ಲಿ ನಿಲುಗಡೆಯಾಗಲಿದೆ. ಧಾರವಾಡದಿಂದ ಬೆಂಗಳೂರಿಗೆ ಚಲಿಸುವ ರೈಲು ಮಧ್ಯಾಹ್ನ 2.42ಕ್ಕೆ ಹಾವೇರಿಯಲ್ಲಿ‌ ನಿಲುಗಡೆಯಾಗಲಿದೆ. ಹಾವೇರಿಯಿಂದ ದಾವಣಗೆರೆ, ತುಮಕೂರು ಮತ್ತು ಬೆಂಗಳೂರಿಗೆ ಪ್ರಯಾಣಿಸುವವರು ಈ ರೈಲಿನಲ್ಲಿ ಹೋಗಬಹುದು. ಉದ್ಯಮಿಗಳು, ವರ್ತಕರು ಮತ್ತು ಐಟಿ ಉದ್ಯೋಗಿಗಳಿಗೆ ಈ ನಿಲುಗಡೆ ಅನುಕೂಲವಾಗಲಿದೆ. ಜೊತೆಗೆ, ಹೂವಿನಹಡಗಲಿ ಬಳ್ಳಾರಿ ಮತ್ತು ಗದಗ ಜಿಲ್ಲೆಗಳ ಜನರಿಗೆ ಇದು ಅನುಕೂಲ ತಂದಿದೆ.

ಎಸಿ ಚೇರ್ ಕಂಪಾರ್ಟ್​ಮೆಂಟ್​ಗೆ ಹಾವೇರಿಯಿಂದ ದಾವಣಗೆರೆಗೆ 645 ರೂ., ತುಮಕೂರಿಗೆ 1,100 ರೂ. ಮತ್ತು ಬೆಂಗಳೂರಿಗೆ 1,210 ರೂ. ನಿಗದಿ ಮಾಡಲಾಗಿದೆ. ಇದೇ ನೀವು ಎಕ್ಸಿಕ್ಯೂಟ್​ನಲ್ಲಿ ಪಯಣಿಸಿದರೆ ದಾವಣಗೆರೆಗೆ 1,055 ರೂ., ತುಮಕೂರಿಗೆ 1,955 ರೂ., ಬೆಂಗಳೂರಿಗೆ 2,170 ರೂ. ದರ ನಿಗದಿ ಮಾಡಲಾಗಿದೆ. ಕೇವಲ ಐದು ಗಂಟೆ ಅವಧಿಯಲ್ಲಿ ಹಾವೇರಿಯಿಂದ ಬೆಂಗಳೂರಿಗೆ ಪಯಣಿಸಬಹುದು. ಎಸಿ ಚೇರ್ ಆದರೆ ಹಾವೇರಿಯಿಂದ ಹುಬ್ಬಳ್ಳಿಗೆ ಸಹ 645 ರೂ., ಧಾರವಾಡಕ್ಕೆ 650 ರೂ., ಎಕ್ಸಿಕ್ಯೂಟ್​ಗೆ 1,060 ರೂ. ಹುಬ್ಬಳ್ಳಿ ಮತ್ತು ಧಾರವಾಡಕ್ಕೆ 1,075 ರೂ. ದರ ನಿಗದಿ ಮಾಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ