Breaking News

ಸಂಬಳ ನೀಡದಿದ್ದಕ್ಕೆ ಬೇಸತ್ತು ಆ್ಯಂಬುಲೆನ್ಸ್ ಚಾಲಕ ಆತ್ಮಹತ್ಯೆ

Spread the love

ಬೆಳಗಾವಿ, ಏಪ್ರಿಲ್​ 13: ಸಂಬಳ ನೀಡದಿದ್ದಕ್ಕೆ ಬೇಸತ್ತು ಡೆತ್​ನೋಟ್ ಬರೆದಿಟ್ಟು ಆ್ಯಂಬುಲೆನ್ಸ್ (Ambulance) ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಓಂಕಾರ ಪವಾರ್ (25) ಮೃತ ದುರ್ದೈವಿ. ಮೃತ ಓಂಕಾರ ಪವಾರ್ ಅವರು ಬೆಳಗಾವಿ (Belagavi) ನಗರದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್​ನ​ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ ನಾಲ್ಕು ತಿಂಗಳ ಸಂಬಳ ನೀಡಿದೇ ಆಸ್ಪತ್ರೆಯವರು ಸತಾಯಿಸುತ್ತಿದ್ದರು. ಸಂಬಳಕ್ಕಾಗಿ ಮನವಿ ಮಾಡಿದ್ರೂ ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಓಂಕಾರ ಪವಾರ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಡೆತ್ ನೋಟ್ ಬರೆದಿಟ್ಟು, ಶಹಾಪುರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಲ್ಕು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಓಂಕಾರ್​ ಅವರಿಗೆ ಒಂದು ಮಗು ಇದೆ. ಇನ್ನು, ಸೇಂಟ್ರಾ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕುಟುಂಬಸ್ಥರು ಮತ್ತು ಡ್ರೈವರ್ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯವರೇ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ