Breaking News

ಕಟಾವಿಗೆ ಬಂದ ಕಬ್ಬಿಗೆ ಬೆಂಕಿ…ಪ್ರಕರಣ ದಾಖಲಾದ್ರೂ ಕ್ರಮಕೈಗೊಳ್ಳದ ಪೊಲೀಸರು…

Spread the love

ಕಟಾವಿಗೆ ಬಂದ ಕಬ್ಬಿಗೆ ಬೆಂಕಿ…ಪ್ರಕರಣ ದಾಖಲಾದ್ರೂ ಕ್ರಮಕೈಗೊಳ್ಳದ ಪೊಲೀಸರು…
ಬೆಳಗಾವಿ ಎಸ್ಪಿಗೆ ದೂರು ನೀಡಿದ ಮುಲ್ಲಾ ಕುಟುಂಬ
ಕಟಾವು ಮಾಡಬೇಕಿದ್ದ ಕಬ್ಬಿನ ಬೆಳೆಗೆ ಬೆಂಕಿ ಇಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಷ್ಟಕ್ಕೊಳಗಾದ ರೈತನ ಕುಟುಂಬ ಬೆಳಗಾವಿ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದ ಯೂನಸ್ ಮುಲ್ಲಾ ಎಂಬುವವರ ಕಟಾವು ಮಾಡಬೇಕಿದ್ದ ಕಬ್ಬಿನ ಬೆಳೆಗೆ ಬೆಂಕಿ ಇಡಲಾಗಿದೆ. ಬೆಂಕಿಯಿಟ್ಟಿರುವ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾದ್ರೂ ಬಂಧನಕ್ಕೆ ಪೊಲೀಸರು ಮೀನಾಮೇಷ ಎನಿಸುತ್ತಿದ್ದಾರೆ.
ಕಾಡವಾಡ ಪೊಲೀಸ ಠಾಣೆ ಪಿಎಸ್ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯೂನೂಸ್ ಮುಲ್ಲಾ ಕುಟುಂಬಸ್ಥರು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದಗೆ ದೂರು ನೀಡಿದ್ದಾರೆ. ಕಬ್ಬು ಕಟಾವು ವಿಚಾರಕ್ಕೆ ಸಹೋದರರ ಮಧ್ಯೆ ಮಾರಾಮಾರಿ ನಡೆದಿದೆ.
ಯೂನೂಸ್ ಮುಲ್ಲಾ ಮೇಲೆ ಶಮ್’ಶೇರ್ ಎಂಬುವವರು ಹಲ್ಲೆ ಮಾಡಿದ್ದಾರೆ. ಆರೋಪಿ ವಿರುದ್ಧ 307 ಪ್ರಕರಣ ದಾಖಲಾದರೂ ಆರೋಪಿ ಬಂಧನಕ್ಕೆ ಪೊಲೀಸರು ಮಿನಾಮೇಷ ಎನಿಸುತ್ತಿದ್ದು, ನಮಗೆ ನ್ಯಾಯ ಕೊಡಿಸಬೇಕೆಂದು ಮುಲ್ಲಾ ಕುಟುಂಬಸ್ಥರು ಎಸ್ಪಿ ಕಾರ್ಯಾಲಯದ ಮೆಟ್ಟೆಲೇರಿದ್ದಾರೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ