Breaking News

ಸದಲಗಾ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀರಾಮ,ಹನುಮಾನ ದೇವರ ಮೂರ್ತಿಗಳ ಮೇರವಣಿಗೆ

Spread the love

ಚಿಕ್ಕೋಡಿ: ರಾಮನವಮಿ ಹಾಗೂ ಹನುಮಾನ ಜಯಂತಿಯ ಅಂಗವಾಗಿ ವಿಶ್ವ ಹಿಂದೂ ಪರಿಷದ ಹಾಗೂ ಬಜರಂಗದಳದ ವತಿಯಿಂದ ಸದಲಗಾ ಪಟ್ಟಣದಲ್ಲಿ ಪ್ರಭು ಶ್ರೀರಾಮ ಹಾಗೂ ಹನುಮಾನ ದೇವರ ಪುತ್ಥಳಿಯ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ, ಶ್ರದ್ಧಾನಂದ ಸ್ವಾಮೀಜಿ ಅವರು ಶ್ರೀರಾಮ ಹಾಗೂ ಹನುಮಾನ ಪುತ್ಥಳಿಗೆ ಪೂಜೆ ಸಲ್ಲಿಸಿ ಹಾಗೂ ಮೆರವಣಿಗೆಗೆ ಚಾಲನೆ ನೀಡಿದರು.
ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ಪುತಳಿಗೆ ಜೊಲ್ಲೆ ದಂಪತಿಗಳು ಪೂಜೆ ಪುಷ್ಪನಮನ ಸಲ್ಲಿಸಿದರು. ಎಲ್ಲೆಡೆ ಕೇಸರಿ ಧ್ವಜಗಳು, ವಾದ್ಯ ಜೊತೆಗೆ ಮೆರವಣಿಗೆಯಲ್ಲಿ ಜೈ ಶ್ರೀ ರಾಮ್ , ಭಜರಂಗ್ ಬಲಿ ಕಿ ಜಯ ಎಂಬ ಘೋಷಣೆಗಳು ಮೆರವಣಿಗೆ ಎಲ್ಲರ ಗಮನಸೆಳೆಯಿತು.ಡಾಲ್ಬಿ ಶಬ್ದಕ್ಕೆ ಯುವಕರು ಹೆಜ್ಜೆಹಾಕಿದರು.
ಈ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಮಾಡಲಾಗಿದೆ.
ಪ್ರಭು ಶ್ರೀ ರಾಮನ ಪ್ರತಿಮೆ ಅನಾವರಣ ಮಾಡಿ ರಾಮ ರಾಜ್ಯವನ್ನು ಪ್ರಾರಂಭ ಮಾಡಿದ್ದಾರೆ. ಯುವಕರಲ್ಲಿ ರಾಷ್ಟ್ರ ಹಾಗೂ ಪ್ರಭು ರಾಮನ ಬಗ್ಗೆ ಅಭಿಮಾನ ಹಾಗೂ ಹನುಮಾನ ಭಕ್ತಿ ಆರಾಧನೆ ಆಗಲಿ ಎಂದು ಹೇಳಿದರು.
ಸದರಿ ಶ್ರೀ ರಾಮ ಹಾಗು ಹನುಮಾನ ಪುತ್ಥಳಿಯನ್ನು ಜೊಲ್ಲೆ ಗ್ರುಪ್ ನಿಂದ ನೀಡಲಾಗಿದೆ.
ಚೆನ್ನಮ್ಮ ಸರ್ಕಲನಲ್ಲಿ ಆನಂದ ಪಾಟೀಲ, ಬಾಳಗೊಂಡ ಪಾಟೀಲ ದರೆಪ್ಪ ಹವಾಲ್ದಾರ, ರಾಜು ಅಮೃತ್ಸಮನ್ವರ, ಗಿರೀಶ್ ಅಡಿಕೆ ಅವರು ಪ್ರಭು ಶ್ರೀರಾಮ, ಹನುಮಾನ ಹಾಗೂ ಜೊಲ್ಲೆ ದಂಪತಿಗಳ ಮೇಲೆ ಜೆಸಿಬಿ ಮುಖಾಂತರ ಹೂಗಳ ಸುರಿಮಳೆ ಗೈಯಲಾಯಿತು.
ನಗರದ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಆನಂದ ಪಾಟೀಲ, ಸುನೀಲ ಮುತನಾಳೆ, ಅಭಿನಂದನ ಪಾಟೀಲ, ರಾಜು ಅಮೃತ್ಸಮನ್ವರ, ಬಾಳಗೊಂಡ ಪಾಟೀಲ ,ದರೆಪ್ಪ ಹವಾಲ್ದಾರ, ಶಿರೀಶ ಅಡಕೆ , ಅನಿರುದ್ಧ ಪಾಟಿಲ,, ಪುರಸಭೆ ಸದಸ್ಯ ಪ್ರಶಾಂತ ಕರಂಗಲೆ, ಹೇಮಂತ ಶಿಂಗೆ, ಚಿದಾನಂದ ಕಮತೆ, ಮಹಾದೇವ ಖೋತ , ಬಾಬುರಾವ್ ಇಂಗಳೆ, ಪ್ರದೀಪ ಪಾಟೀಲ, ಸುನಿಲ್ ನಂದೆ, ಅತಿಕ್ರಾಂತ ಪಾಟಿಲ, ರೋಹಿತ ಕೋಗನೋಳೆ,ಜ್ಯೋತಿ ಚಿಂಚನಿಕರ, ಮೀನಾಕ್ಷಿ ಯಾದವ ಅಪ್ರೀತಾ ಪಾಟೀಲ,ಸ್ಮೀತಾ ಮಾನೆ, ಅಮೃತಾ ಶಿತೊಳೆ , ಆದಿತ್ಯ ಅಡಕೆ ರತನ ಪಾಟಿಲ , ಬಯಾಬಾಯಿ ಬಾಗಡಿ, ಮೋನಿಕಾ ಪಾಟೀಲ, ಸಂಜಯ ಪಾಟಿಲ ಸೇರಿದಂತೆ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಹಾಗೂ ಭಕ್ತರು ಭಾಗಿಯಾಗಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ