ಹಾವೇರಿ: ಸ್ನೇಹಿತೆಯ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳನ್ನು ಹಾವೇರಿ ಶಹರ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಅರುಣ್ ಬಡ್ನಿ, 24 ವರ್ಷದ ನಾಗರಾಜ್ ದೊಡ್ಡವಾಡ , 27 ವರ್ಷದ ಅಕ್ಷಯ್ ಹಾಗೂ 26 ವರ್ಷದ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ.
ಹಲ್ಲೆ ಹಿಂದಿನ ಕಾರಣ ಇದು: ಹಾವೇರಿಯ ಖಾಸಗಿ ಕಾಲೇಜಿನ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಚೇತನ್ ಅರಗೋಳ್ ಎಂಬ ಯುವಕನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಖಾಸಗಿ ಕಾಲೇಜ್ ವೊಂದರ ಬಿ.ಕಾಂ ವಿದ್ಯಾರ್ಥಿ ಆಗಿದ್ದ ಚೇತನ್, ಕ್ಲಾಸ್ ಮೇಟ್ ರಂಜಿತಾ ಎಂಬಾಕೆ ಜತೆ ಸ್ನೇಹ ಬೆಳಸಿದ್ದ. ಚೇತನ್ ಹಾಗೂ ರಂಜಿತಾ ಒಟ್ಟೊಟ್ಟಿಗೆ ಕಂಪ್ಯೂಟರ್ ಕ್ಲಾಸ್ ಗೂ ತೆರಳುತ್ತಿದ್ದರು. ಇವರಿಬ್ಬರ ಸ್ನೇಹ ನೋಡಿ ಸಹಿಸಲಾಗದೇ ತಲೆಕೆಡಸಿಕೊಂಡಿದ್ದ ಅರುಣ್, ನನ್ನನ್ನು ಪ್ರೀತಿಸುತ್ತಿರುವ ಹುಡುಗಿಯನ್ನ ನೀನು ಪ್ರೀತಿಸುತ್ತಿದ್ದೀಯಾ ಎಂದು ಹೇಳಿ ಚೇತನ್ ಮೇಲೆ ಸಿಟ್ಟು ಮಾಡಿಕೊಂಡಿದ್ದ.
ನಾನು ಅವಳನ್ನು ಲವ್ ಮಾಡಿಲ್ಲ ಅಂತಾ ಚೇತನ್ ಹೇಳಿದರೂ ಬಿಡದೇ ಆತನ ಮೇಲೆ ಅರುಣ್ ಮನಸೊ ಇಚ್ಚೆ ಹಲ್ಲೆ ಮಾಡಿದ್ದ. ಅರುಣ್ ಅಂಡ್ ಟೀಮ್ ದೇವಿಹೊಸೂರು ಕ್ರಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಚೇತನನನ್ನು ಕರೆದೊಯ್ದು ಹಲ್ಲೆ ಮಾಡಿ ಪರಾರಿಯಾಗಿತ್ತು.
ದಾರಿ ಹೋಕರ ಸಹಾಯದಿಂದ ಆಸ್ಪತ್ರೆ ಸೇರಿದ್ದ ಚೇತನ್: ದಾರಿ ಹೋಕರ ಸಹಾಯದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡ ಚೇತನ್, ಆರೋಗ್ಯದಲ್ಲಿ ತುಸು ಚೇತರಿಕೆ ಕಂಡ ಬಂದ ಬಳಿಕ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದ ಪೊಲೀಸರು: ಬಂಧಿತ ಆರೋಪಿಗಳಿಂದ ಚೇತನ್ ಮೊಬೈಲ್ ಮತ್ತು ಆರೋಪಿಗಳ ಬಳಿಸಿದ ಮೊಬೈಲ್ ಮತ್ತು ಕಿಡ್ನಾಪ್ಗೆ ಬಳಕೆ ಮಾಡಿದ್ದ ಕಾರ್ ವಶಪಡಿಸಿಕೊಂಡಿದ್ದಾರೆ. ಇತ್ತ ತೀವ್ರವಾಗಿ ಗಾಯಗೊಂಡಿದ್ದ ಚೇತನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
Laxmi News 24×7