Breaking News

ಗ್ರಾಮ ಪಂಚಾಯಿತಿಯ ಕಂಪ್ಯೂಟರ್ (ಡೇಟಾ) ಆಪರೇಟರ್ ಆತ್ಮಹತ್ಯೆ

Spread the love

ಖಾನಾಪೂರ ತಾಲೂಕಿನ ನಿಟ್ಟುರು ಗ್ರಾಮ ಪಂಚಾಯಿತಿಯ ಕಂಪ್ಯೂಟರ್ (ಡೇಟಾ) ಆಪರೇಟರ್ ಆಗಿದ್ದ ಸಂಜಯ್ ಕೋಳಿ (ವಯಸ್ಸು 45) ಅವರು ಏಪ್ರಿಲ್ 2, 2025 ರ ಬುಧವಾರ ಬೆಳಿಗ್ಗೆ ನಾಗುರ್ಡಾ ಗ್ರಾಮದ ತಮ್ಮ ಹೊಲದಲ್ಲಿ ಮರಕ್ಕೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ ಸಂಜಯ್ ಕೋಲಿ 1997 ರಿಂದ ನಿಟ್ಟುರು ಗ್ರಾಮ ಪಂಚಾಯತ್‌ನಲ್ಲಿ ಕಂಪ್ಯೂಟರ್ ಡೇಟಾ ಆಪರೇಟರ್ ಮತ್ತು ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ, ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಅವರು ತಮ್ಮ, ಜಮೀನಿಗೆ ಹೋಗುತ್ತಿರುವುದಾಗಿ ಹೇಳಿ ಹೊರಟಿದ್ದರು. ಆದರೆ ಬಹಳ ಸಮಯ ಕಳೆದರೂ ಸಂಜಯ್ ಮನೆಗೆ ಹಿಂತಿರುಗಲಿಲ್ಲ,
ಆದ್ದರಿಂದ ಅವನ ಕುಟುಂಬದ ಸದಸ್ಯರು ಹೊಲಕ್ಕೆ ಹೋಗಿ ನೋಡಿದಾಗ, ಸಂಜಯ್ ಮರಕ್ಕೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಈ ಬಗ್ಗೆ ಖಾನಾಪೂರ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಗಿ. ಖಾನಾಪೂರ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪೂರದ ಸರ್ಕಾರಿ ಆಸ್ಪತ್ರೆಗೆ ತಂದರು. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಖಾನಾಪೂರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಜಯ್ ಅವರ ತಾಯಿ, ಪತ್ನಿ, ಇಬ್ಬರು ಚಿಕ್ಕ ಮಕ್ಕಳು, ಒಬ್ಬ ಮಗ ಮತ್ತು ಮಗಳು ಅಗಲಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ