Breaking News

ಬೆಲೆ ಏರಿಕೆ ಖಂಡಿಸಿ ಮುಂದುವರೆದ ಬಿಜೆಪಿ ಅಹೋರಾತ್ರಿ ಧರಣಿ

Spread the love

ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯಿಂದ ಫ್ರೀಡಂ ಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದ್ದು,‌ ರಾತ್ರಿಯಾದರೂ ಮಾಜಿ ಸಿಎಂ ಯಡಿಯೂರಪ್ಪ ಉತ್ಸಾಹದಲ್ಲೇ ಧರಣಿಯಲ್ಲಿ ಕೂತಿದ್ದಾರೆ. ಹಿರಿಯ ಬಿಜೆಪಿ ಮುಖಂಡರೂ ಸಾಥ್​ ನೀಡಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದಲೂ ಯಡಿಯೂರಪ್ಪ ಭಾಗವಹಿಸಿದ್ದು, ರಾತ್ರಿಯಾದರೂ ಧರಣಿ ಮುಂದುವರೆಸಿದ್ದಾರೆ.‌ ಇತರ ಬಿಜೆಪಿ ನಾಯಕರೂ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.‌ಧರಣಿಗೆ ಆಗಮಿಸಿದ ರೆಬೆಲ್ ಶಾಸಕ ಬಿ.ಪಿ.ಹರೀಶ್: ಬಿಜೆಪಿ ಅಹೋರಾತ್ರಿ ಧರಣಿಗೆ ಯತ್ನಾಳ್ ಟೀಂ ಜೊತೆ ಗುರುತಿಸಿಕೊಂಡಿದ್ದ ಶಾಸಕ ಬಿ.ಪಿ.ಹರೀಶ್ ಆಗಮಿಸಿದ್ದಾರೆ. ಇವರಿಗೆ ಬಿಜೆಪಿಯು ಇತ್ತೀಚೆಗಷ್ಟೇ ಶೋಕಾಸ್ ನೊಟೀಸ್ ನೀಡಿತ್ತು. ಧರಣಿಗೆ ಆಗಮಿಸಿದ ಬಿ.ಪಿ.ಹರೀಶ್​​ಗೆ ವಿಜಯೇಂದ್ರ ಬೆಂಬಲಿಗನೋರ್ವ ಇರಿಸುಮುರಿಸು ಉಂಟು ಮಾಡಿದ ಘಟನೆ ನಡೆಯಿತು. ಹರೀಶ್ ಎದುರೇ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಅಂತ ಘೋಷಣೆ ಕೂಗಿರುವುದು ಕಂಡುಬಂತು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ