Breaking News
Home / ಜಿಲ್ಲೆ / ಹಾಸನ / ರೈತ ವಿರುದ್ದ ಕಾಯ್ದೆಯಾಗಿದ್ದರೆ ಜೆಡಿಎಸ್ ವಿರೋಧಿಸುತ್ತಿತ್ತು : ನಮ್ಮ ಪಕ್ಷ ರೈತರ ಪರವಿದೆ

ರೈತ ವಿರುದ್ದ ಕಾಯ್ದೆಯಾಗಿದ್ದರೆ ಜೆಡಿಎಸ್ ವಿರೋಧಿಸುತ್ತಿತ್ತು : ನಮ್ಮ ಪಕ್ಷ ರೈತರ ಪರವಿದೆ

Spread the love

 

 

 

ಹಾಸನ: ನಮ್ಮ ಜೆಡಿಎಸ್ ಪಕ್ಷವು ರೈತರ ವಿರುದ್ಧ ಇಲ್ಲ. ರೈತರ ಪರವಾಗಿದ್ದು, ಏನಾದರೂ ರೈತರ ವಿರುದ್ಧದ ಕಾಯಿದೆ ಇದ್ದರೇ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.​ ​ಹಾಸನದಲ್ಲಿ ​ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, “ಭೂಸುಧಾರಣಾ ಕಾಯ್ದೆಗೆ ಈಗಲೂ ನಮ್ಮದು ವಿರೋಧವಿದೆ. ರೈತರಿಗೆ ಕೆಲವು ವಿಷಯ ಮಾರ್ಪಾಡು ಮಾಡುತ್ತೇವೆ ಎಂದಾಗ ನಾವು ಬೆಂಬಲಿಸಿದ್ದೇವೆ. ಕೆಲ ವಿಷಯಗಳನ್ನ ಮಾರ್ಪಾಡು ಮಾಡಿದ ಬಳಿಕ ನಾವು ಕಾಯ್ದೆ ಪರವಾಗಿ ಮತ ಹಾಕಿದ್ದೇವೆ” ಎಂದು ಹೇಳುವ ಮೂಲಕ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಂದೆ ಇದೇ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದ ಆ ನಾಯಕರೇ ಇಲ್ಲಾ ಅವರ ಉಸಿರೇ ಇಲ್ಲಾ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. 2013 ರಲ್ಲಿ ಈ ಭೂಸುಧಾರಣಾ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದವರು ಯಾರು? ವಿಧಾನ ಪರಿಷತ್ ನಲ್ಲಿ 13 ಜನ ಕಾಂಗ್ರೆಸ್ ಸದಸ್ಯರು ಗೈರಾಗಿದ್ದು ಯಾಕೆ? ಅವರನ್ನ ಗೈರು ಮಾಡಿಸಿದವರು ಯಾರು? ಎಂದು ತನಿಖೆ ಮಾಡಿಸಿ” ಎಂದು ಸವಾಲ್ ಹಾಕಿದರು.


Spread the love

About Laxminews 24x7

Check Also

ಅಜಾನ್ ವಿರುದ್ಧ ಜೂನ್ 1ರಿಂದ ಮತ್ತೆ ಹೋರಾಟ: ಮುತಾಲಿಕ್

Spread the love ಹಾಸನ, ಮೇ 22: “ಅಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ