ಬೆಳಗಾವಿ:ವಕ್ಫ್ ಕಾಯ್ದೆ ತಿದ್ದುಪಡಿ ರದ್ದಿಗೆ ಆಗ್ರಹಿಸಿ ಮುಸ್ಲಿಂ ಯುವಕರಿಂದ ಪೋಸ್ಟರ್ ಪ್ರದರ್ಶನ…
ಕಿತ್ತೂರಿನಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ….
ವಕ್ಫ್ ಕಾಯ್ದೆ ತಿದ್ದುಪಡಿ ರದ್ದಿಗೆ ಆಗ್ರಹಿಸಿ ಮುಸ್ಲಿಂ ಯುವಕರಿಂದ ಪೋಸ್ಟರ್ ಪ್ರದರ್ಶನ
ಎಸ್ ಡಿ ಪಿ ಐ ರಾಷ್ಟ್ರೀಯ ಅಧ್ಯಕ್ಷರ ಬಿಡುಗಡೆಗೆ ಆಗ್ರಹ
ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆರವಣಿಗೆ
ಬೆಳಗಾವಿ ಅಂಜುಮನ್ ಸಂಸ್ಥೆ ಎದುರು ಪೋಸ್ಟರ್ ಪ್ರದರ್ಶನ
ಬೆಳಗಾವಿ ನಗರದ ಡಿಸಿ ಕಚೇರಿ ಎದುರಿಗಿನ ಅಂಜುಮನ್ ಸಂಸ್ಥೆ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಾರ್ಥನೆಗಾಗಿ ಸೇರಿದ್ದ ಮುಸ್ಲಿಮರು ನಂತರ ಅಂಜುಮನ್ ಸಂಸ್ಥೆ ಎದುರು ವಕ್ಫ್ ಕಾಯ್ದೆ ತಿದ್ದುಪಡಿ ರದ್ದತಿ, ಎಸ್ ಡಿ ಪಿ ಐ ರಾಷ್ಟ್ರೀಯ ಅಧ್ಯಕ್ಷ ಎಂ. ಕೆ. ಫೈಜಿ ಬಿಡುಗಡೆ ಮಾಡುವಂತೆ ಆಗ್ರಹಿಸುವ ಹಾಗೂ ಮತ್ತೊಂದೆಡೆ ಕ್ರೈಸ್ತ ಮಂಡಳಿಯಲ್ಲಿ ಕ್ರೈಸ್ತರು, ಮುಜರಾಯಿಯಲ್ಲಿ ಹಿಂದೂಗಳು ಇರುವಾಗ ವಕ್ಫ್ ನಲ್ಲಿ ಮುಸ್ಲಿಮರೇ ಇರಬೇಕಲ್ಲ ಎಂಬ ಪೋಸ್ಟರ್ ಗಳನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ವಕ್ಫ್ ಕಾಯ್ದೆ ತಿದ್ದುಪಡಿ ರದ್ದಾಗಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದವರು ಭಾಗಿಯಾಗಿದ್ದರು
ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಚೆನ್ನಮ್ಮನ ಕಿತ್ತೂರಿನ ಪಟ್ಟಣದಲ್ಲೂ ನೂರಾರು ಸಂಖ್ಯೆಯಲ್ಲಿದ್ದ ಮುಸ್ಲಿಮರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.
Laxmi News 24×7