Breaking News

ಇಟಗಿಯ ಮಹಾದೇವನಿಗೆ ಸೂರ್ಯ ಕಿರಣ ಸ್ಪರ್ಶ

Spread the love

ಕೊಪ್ಪಳ : ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಿಂದುಗಳಿಗೆ ಹೊಸವರ್ಷ. ಹೊಸವರ್ಷವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಇದೇ ವೇಳೆ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವನು ಸಹ ತನ್ನ ಮೊದಲು ಕಿರಣವನ್ನು ದೇವರಿಗೆ ಸ್ಪರ್ಶ ಮಾಡುತ್ತಾನೆ. ವಿಸ್ಮಯವಾಗಿರುವ ಈ ಕೌತುಕ ನೋಡಲು ಜನ ಬೆಳಗ್ಗೆ ಕಾದು ಕುಳಿತಿರುತ್ತಾರೆ.

ಹೌದು, ಪುರಾತನ ದೇವಾಲಯಗಳನ್ನು ನಿರ್ಮಿಸುವಾಗ ದೇವರ ಮೂರ್ತಿಗೆ ಯುಗಾದಿಯ ದಿನದಂದು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ನಿರ್ಮಿಸಿರುವುದು ಕೌತುಕ ಮತ್ತು ವಿಶೇಷವಾಗಿದೆ. ಇಂಥ ಕೌತುಕ ಹಾಗೂ ವಿಶೇಷತೆಗಳು ಕೊಪ್ಪಳ ಜಿಲ್ಲೆಯ ಎರಡು ದೇವಾಲಯಗಳಲ್ಲಿ ಕಂಡು ಬಂದಿವೆ.ಇಟಗಿಯ ಮಹಾದೇವನಿಗೆ ಸೂರ್ಯ ಕಿರಣ ಸ್ಪರ್ಶ: ಜಿಲ್ಲೆಯ ಕುಕನೂರ ತಾಲೂಕಿನ ಇಟಗಿಯಲ್ಲಿರುವ ಮಹಾದೇವ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಮಾಂಡಲೀಕ ಮಹಾದೇವ ದಂಡನಾಯಕ 12ನೆಯ ಶತಮಾನದಲ್ಲಿ ನಿರ್ಮಿಸಿದ್ದಾನೆ. ದೇವಾಲಯಗಳ ಚಕ್ರವರ್ತಿ ಎಂಬ ಖ್ಯಾತಿ ಹೊಂದಿರುವ ದೇವಾಲಯದಲ್ಲಿಯ ಮಹಾದೇವನ ಲಿಂಗುವಿನ ಮೇಲೆ ಇಂದು ಹೊಸ ವರ್ಷದ ಮೊದಲ ದಿನ ರವಿಕಿರಣ ಸ್ಪರ್ಶಿಸಿದೆ. ಇದು ಪ್ರತಿ ವರ್ಷವೂ ಕಂಡು ಬರುವ ದೃಶ್ಯವಾಗಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ