Breaking News

ಮಹಾನಾಯಕನನ್ನು ನಾವೆಲ್ಲಿ ಹುಡುಕೋದು. ಪೊಲೀಸರೇ ಹುಡುಕಬೇಕು:ಸತೀಶ್ ಜಾರಕಿಹೊಳಿ

Spread the love

ಬೆಂಗಳೂರು : ಮಹಾನಾಯಕನನ್ನು ನಾವೆಲ್ಲಿ ಹುಡುಕೋದು. ಪೊಲೀಸರೇ ಹುಡುಕಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚ್ಯವಾಗಿ ತಿಳಿಸಿದ್ದಾರೆ.

ಆಗಾಗ ಮಹಾನಾಯಕನ ಹೆಸರು ಕೇಳಿಬರುತ್ತಿದ್ದು, ಆ ಮಹಾನಾಯಕ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಮಹಾನಾಯಕರು ದೇಶದಲ್ಲಿ ಸುಮಾರು ಇದ್ದಾರೆ. ಹುಡುಕುವುದಕ್ಕೆ ಸಮಯ ಬೇಕಾಗುತ್ತದೆ. ಪೊಲೀಸರು ಹುಡುಕಲಿ.‌ ಬೇರೆ ರಾಜ್ಯಗಳಲ್ಲಿ ಅಂತ ಘಟನೆಗಳು ಆಗಿದೆ. ನಮ್ಮ ರಾಜ್ಯದಲ್ಲಿ ಆದ ಉದಾಹರಣೆ ಇದೆ. ಇವರೇ, ಅವರೇ ಅಂತ ಹೇಳೋಕೆ ಆಗಲ್ಲ. ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದರು.

ಎಂಎಲ್​ಸಿ ರಾಜೇಂದ್ರ ಕ್ಯಾತ್ಸಂದ್ರದಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರೇ ತನಿಖೆ ಮಾಡಿ ಹೇಳಬೇಕು. ಆ ನಾಯಕ ಯಾರು ಅಂತ ತ‌ನಿಖೆ ಮಾಡಿ ಹೇಳಬೇಕು. ಯಾರ ಮೇಲೆ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಪ್ರಭಾವಿ ನಾಯಕರು ಯಾರು ಅಂತ ಪೊಲೀಸರೇ ಕಂಡು ಹಿಡಿಯಬೇಕು.

ನಾವೇನು ತನಿಖಾ ಏಜೆನ್ಸಿ ಅಲ್ಲ, ಕಾದು ನೋಡೋಣ ಎಂದು ಹೇಳಿದರು.ಸುದ್ದಿ ಆಗುವಂತದ್ದು ಏ‌ನೂ ಇಲ್ಲ : ಸಚಿವ ಹೆಚ್. ಸಿ ಮಹದೇವಪ್ಪ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮದು ಮಹದೇವಪ್ಪ ಅವರದು 30 ವರ್ಷಗಳ ಸ್ನೇಹ. ಈ ಭೇಟಿಗೆ ವಿಶೇಷ ಕಾರಣ ಏನಿಲ್ಲ. ಹೊಸದೇನು ಇಲ್ಲ. ಮಾಮೂಲಿನಂತೆ ಸಚಿವರ ಭೇಟಿ ಮಾಡಿದ್ದೇವೆ. ನಮ್ಮ ಭೇಟಿಯಲ್ಲಿ ಅಂತದ್ದೇನು ಇಲ್ಲ. ಸುದ್ದಿ ಆಗುವಂತದ್ದು ಏ‌ನೂ ಇಲ್ಲ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ