Breaking News

ವರದಕ್ಷಣೆ ಕಿರುಕುಳ- ಮಹಿಳೆ ಸಾವು

Spread the love

ವರದಕ್ಷಣೆ ಕಿರುಕುಳ- ಮಹಿಳೆ ಸಾವು
ಆತ ಮದುವೆಯಾಗಿ ಕಳೆದಿದ್ದು 9 ತಿಂಗಳು ಮಾತ್ರ.ಅಷ್ಟರಲ್ಲಿ ಆ ಭೂಪ ತವರು ಮನೆಯಿಂದ ವರದಕ್ಷಣೆ ತರುವಂತೆ ಹೆಂಡತಿಗೆ ನಿತ್ಯ ಕಿರುಕುಳ ನೀಡ್ತಿದ್ದ. ಜಗಳವಾಡಿ ತವರು ಮನೆಗೂ ಕಳಿಸಿದ್ದ ಪತಿರಾಯ.ಗ್ರಾಮದ ಹಿರಿಯರು ಬುದ್ದಿವಾದ ಹೇಳಿ ಪತ್ನಿನಾ ಮಾವನ ಜೊತೆ ಗಂಡನ ಮನೆ ಕಳಿಸಿಕೊಂಡಿದ್ರು.ಗಂಡನ ಮನೆಗೆ ಬಂದ ಪತ್ನಿಗೆ ಒಂದೇ ದಿನ ಮನೆಯವ್ರೆಲ್ಲ ಸೇರಿ ಕಿರುಕುಳ,ಹಲ್ಲೆ ನಡೆಸಿದ್ದಾರೆ.ಬೆಳಗಾಗುದ್ರಲ್ಲಿ ಹಲ್ಲೆಗೊಳಗಾದ ಮಹಿಳೆ ಸಾವನ್ನಪ್ಪಿದ್ದಾಳೆ.ಡೌರಿ ಟಾರ್ಚರ್ ಮರ್ಡರ್ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…
ಒಂದೆಡೆ ತಾಳಿ ಕಟ್ಟಿದ ಗಂಡನ ಜೊತೆಗಿನ ಪೋಟೋದಲ್ಲಿ ಮಂದಹಾಸದಲ್ಲಿ ಕಣ್ತಿರೋ ಯುವತಿ.ಮತ್ತೊಂದೆಡೆ ವರದಕ್ಷಣೆ ಕಿರುಕಳಕ್ಕೆ ಬಲಿಯಾಗಿ ಬೆಡ್ ಮೇಲೆ ಹೆಣವಾಗಿರೋ ಮನೆ ಸೊಸೆ.ಇನ್ನೊಂದೆಡೆ ಮಗಳನ್ನ ಕಳೆದುಕೊಂಡ ಸಂಬಂಧಿಕರ ಆಕ್ರಂಧನ.ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮ.ಹೌದು ಗ್ರಾಮದ ಪ್ರವೀಣ್ ಗಂಗಲ್ ಕಳೆದ 9 ತಿಂಗಳ ಹಿಂದೆ ಗಜೆಂದ್ರಗಡ್ ವಾತ್ಸಲ್ಯ (31)ಎಂಬುವವರನ್ನ ಮದುವೆಯಾಗಿದ್ದ.
ಆರಂಭದಲ್ಲಿ ಬದುಕು ಚನ್ನಾಗಿತ್ತು.ಆದ್ರೆ ಬರಬರುತ್ತೆ ಮಾವ-ಅಂದಾಪ್ಪ,ಅತ್ತೆ-ಸುನಂದಾ ಹಾಗೂ ಇಬ್ಬರು ನಾದನಿಯರ ಕಿರುಕುಳ ವಾತ್ಸಲ್ಯಳಿಗೆ ಹೆಚ್ಚಾಗಿತ್ತು.ಗಂಡ ಕೂಡಾ ತವರು ಮನೆಯಿಂದ ವರದಕ್ಷಣೆ ತರುವಂತೆ ನಿತ್ಯ ಕಿರುಕುಳ ನೀಡ್ತಿದ್ದ,ಮಾರಣಾಂತಿಕ ಹಲ್ಲೆ ನಡೆಸಿ ತವರು ಮನೆಗೆ ಕಳೆದ 20 ರಂದು ಕಳಿಸಿದ್ದ.ಆಗಮ ನಮ್ಮ ತಂಗಿ ಗಂಡನ ಮನೆಯಲ್ಲಿ ಅನುಭವಿಸಿದ ನರಕಯಾತನೆ ಹೇಳಿದ್ಲು.
ಪ್ರವೀಣ್ ಸಿಗರೆಟ್ ನಿಂದ ವಾತ್ಸಲ್ಯಳ ಮೈ ಸುಟ್ಟಿದ್ದಾನೆ.ಇಷ್ಟೆಲ್ಲ ಆದ ಮೇಲೂ ಹಿರಿಯರ ಸಮ್ಮುಖದಲ್ಲಿ ಮಾರ್ಚ್ 24 ರಂದು ಮಾವ ಅಂದಾಪ್ಪ ಸೊಸೆಯನ್ನ ರಾಜೀ ಮಾಡಿಕೊಂಡು ಗಂಡನ ಮನೆಗೆ ಕರೆದುಕೊಂಡ ಹೊಗಿದ್ದಾನೆ.ಹೋದ ಒಂದೆ ದಿನದಲ್ಲಿ ವಾತ್ಸಲ್ಯಳಿಗೆ ಚಿತ್ರ ಹಿಂಸೆ ನೀಡಿದ್ದಾರೆ.ಅವಳ ಸಾವಿಗೆ ಗಂಡ ಪ್ರವೀಣ್, ಅತ್ತೆ ಸುನಂದಾ,ಮಾವ ಅಂದಪ್ಪಾ ಹಾಗೂ ಶಶಿಕಲಾ,ವಿಜಯಲ್ಷ್ಮೀ ಕಾರಣ ಎಂದು 7 ಜನರ ವಿರುದ್ದ ಬದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ಇನ್ನು ಮೃತಳ ಗಂಡ ಪ್ರವೀಣ್ ಗಂಗಲ್ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದು,ಅಲ್ಲಿಯೂ ಕೂಡಾ ಹೆಂಡತಿ ವಾತ್ಸಲ್ಯಳಿಗೆ ದಿನ ನಿತ್ಯ ವರದಕ್ಷಣೆ ತರುವಂತೆ ಕಿರುಕುಳ ನೀಡ್ತಿದ್ದ ಆರೋಪ ಕೇಳಿ ಬಂದಿದೆ.ಅಲ್ದೆ ಮಾವ, ಅತ್ತೆ,ಗಂಡನ ಅಕ್ಕಂದಿರು ಎಲ್ಲರೂ ಸೇರಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂಬ ಮಾತುಗಳು ಸ್ಥಳೀಯರು ಮಶತನಾಡ್ತಿದ್ದಾರೆ.
ಗಂಡನ ಕಿರುಕುಳ ತಾಳದೆ ಕಳೆದ ವಾರ ಬೆಂಗಳೂರಿನಿಂದ ತವರೂರು ಗಜೆಂದ್ರಗಡ್ ನ ಅಮ್ಮನ ಮನೆಗೆ ಬಂದಿದ್ಲು ವಾತ್ಸಲ್ಯ.ಗಂಡ ಸಿಗರೇಟ್ ನಿಂದ ಕೈ,ತಲೆ,ದೇಹದ ಮೇಲೆ ಸುಟ್ಟಿದ್ದರ ಕುರಿತು ಎಂಎಲ್ ಸಿ ಕೂಡಾ ಮಾಡಲಾಗಿದೆ.ಬಳಿಕ ಹಿರಿಯ ಮದ್ಯಸ್ಥಿಕೆಯಲ್ಲಿ ರಾಜೀ ಮಾಡಿ ಕಳೆದ 24 ರಂದು ಗಂಡನ ಮನೆಗೆ ಕರೆದುಕೊಂಡು ಬಂದಿದ್ದಾನೆ ಮಾವ. ಗಂಡನ ಮನೆಗೆ ಬಂದ ಮಾರನೆ ದಿನವೇ ವಾತ್ಸಲ್ಯಳಿಗೆ ಕಿರುಕುಳ ನೀಡಿ ಸಾವು ಸಂಭವಿಸುವಂತೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಾದಾಮಿ ಪೊಲೀಸರು ಪರಿಶೀಲನೆ ನಡೆಸಿದ್ರು.ಮೃತಳ ಸಹೋದರಿ ಛಾಯಾ ನೀಡಿದ ದೂರಿನನ್ವಯ ತನಿಖೆ ಆರಂಭಿಸಿದ್ದಾರೆ ಪೊಲೀಸರು..
ಒಟ್ಟಿನಲ್ಲಿ ಮಗ-ಸೋಸೆ ಜೀವನಕ್ಕೆ ಆದರ್ಶ ಆಗುವಂತೆ ನಡೆದುಕೊಳ್ಳಬೇಕಿದ್ದ ಅತ್ತೆ-ಮಾನವ ದುರಾಸೆಯದ ಮಗ ಹದಗೆಟ್ಟು ಮನೆಯವರ ಮಾತು ಕೇಳಿ ನಂಬಿ ಬಂದ ಹೆಂಡತಿಗೆ ವರದಕ್ಷಣೆ ಕಿರುಕುಳ ನೀಡಿ ಇಹಲೋಕ ತ್ಯಜಿಸುವಂತೆ ಮಾಡಿದ್ದು.ದುರಂತವೇ ಸರಿ.ಬಾಳಿ ಬದುಕಬೇಕಿದ್ದ ಹೆಣ್ಣು ಮಸನ ಸೇರಿದ್ದು ಮಾತ್ರ ಮೃತಳ ಸಂಬಂಧಿಕರ ಕರಳು ಹಿಂಡುತ್ತಿರೋದು ಸುಳ್ಳಲ್ಲ…

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ