Breaking News

ಯುವ ಪೀಳಿಗೆಗೆ ಅಧ್ಯಾತ್ಮದ ಅರಿವು ಮೂಡಿಸುವುದು ಅಗತ್ಯವಾಗಿದೆ.

Spread the love

ಅಥಣಿ :ಯುವ ಪೀಳಿಗೆಗೆ ಅಧ್ಯಾತ್ಮದ ಅರಿವು ಮೂಡಿಸುವುದು ಅಗತ್ಯವಾಗಿದೆ. ಆಧುನಿಕ ಜಂಜಾಟಗಳಲ್ಲಿ ಯುವ ಜನತೆಗೆ ಆಧ್ಯಾತ್ಮಿಕ ಅರಿವು ಮೂಡಿಸಲು ಆಶ್ರಮಗಳ ಅಗತ್ಯವಿದೆ. ಜ್ಯಾತ್ಯತೀತ ತತ್ವದ ಮೂಲಕ ಮಾನವ ಕಲ್ಯಾಣ ಮಾಡುತ್ತ ಬಂದಿರುವ ಇಂಚಗೇರಿ ಸಂಪ್ರದಾಯದ ತತ್ವಗಳು ನಾಡಿನಲ್ಲಿ ಅತ್ಯಂತ ಶ್ರೇಷ್ಠವಾಗಿವೆ.ಮಾನವ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿರುವ ಮಾಧವಾನಂದರ ಉಪದೇಶ, ಸಂದೇಶ ಅಥಣಿ ಜನತೆಗೆ ದೊರೆಯಲಿ ಎಂಬ ಉದ್ದೇಶದಿಂದ ಮಾಧವಾನಂದ ಪ್ರಭುಗಳ ಆಶ್ರಮ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.ಈ ಭಾಗದ ಇಂಚಗೇರಿ ಸಂಪ್ರದಾಯದ ಭಕ್ತಾದಿಗಳ ಬಹುದಿನದ ಕನಸು ಇಂದು ನೆರವೇರಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ಪಟ್ಟಣದ ದಿವಾನಮಳ ತೋಟದಲ್ಲಿ ಶ್ರೀ ಸ.ಸ.ಮಾದವಾನಂದ ಪ್ರಭುಜೀ ಆಶ್ರಮದ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡದ ಭೂಮಿ ಪೂಜೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು,ಅಥಣಿಯ ಶಾಸಕರಾದ ಲಕ್ಷ್ಮಣ ಸವದಿಯವರು ನೆರವೇರಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಥಣಿ ತಾಲೂಕಿನ ಇಂಚಗೇರಿ ಸಂಪ್ರದಾಯದ ಆಶ್ರಮ ನಿರ್ಮಾಣ ಹಾಗೂ ಎಲ್ಲ ಪವಿತ್ರ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು. ಈ ವೇಳೆ ಶ್ರೀ. ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಇಂಚಗೇರಿ ಮಠ ಅವರಿಂದ ಆಶೀರ್ವಾದ ವನ್ನು ಪಡೆದುಕೊಂಡರು.
ಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಇಂಚಗೇರಿ ಮಠದ ಪೀಠಾಧಿಪತಿಗಳಾದ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಇಂಚಗೇರಿ ಮಠ ಅವರು ಆಶೀರ್ವಚನ ನೀಡುತ್ತಾ 12ನೇ ಶತಮಾನದಲ್ಲಿ ಬಸವಣ್ಣನವರು ಕಂಡಿದ್ದ ಜಾತ್ಯಾತೀತ ನವ ಸಮಾಜದ ಕನಸನ್ನು ಇಂದು ಇಂಚಗೇರಿ ಸಂಪ್ರದಾಯ ಮಾಧವಾನಂದ ಪ್ರಭುಜಿಗಳ ನೇತೃತ್ವದಲ್ಲಿ ಜಾರಿಗೆ ತಂದಿದೆ. ಇಂದು ಹಲವಾರು ಸಮಾಜಗಳ ಜಾತಿ ಮತ ಪಂಥಗಳ ಜನ ಒಂದೇ ಸೂರಿನಲ್ಲಿ ಬದುಕುತ್ತಿರುವ ಜೀವಂತ ಉದಾಹರಣೆ ಇಂಚಗೇರಿ ಮಠದಲ್ಲಿ ಕಾಣಬಹುದು. ಅಥಣಿಯಲ್ಲಿ ಇಂದು ಮಾಧವಾನಂದ ಪ್ರಭುಗಳ ಆಶ್ರಮ ನಿರ್ಮಾಣ ಮಾಡುವ ಮೂಲಕ ಈ ಭಾಗದ ದಿಂಡಿ ಪಲ್ಲಕ್ಕಿ ಪಾದಯಾತ್ರಿಕರಿಗೆ ಹಾಗೂ ಭಕ್ತಿ ಮಾರ್ಗವನ್ನು ಅರಸಿ ಬರುವವರಿಗೆ ಮಾರ್ಗದರ್ಶನ ಮಾಡುವ ತಾಣವಾಗಲಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿಯವರ ಸಂಪೂರ್ಣ ಸಹಕಾರ ಹಾಗೂ ಈ ಭಾಗದ ಭಕ್ತಾದಿಗಳ ತನುಮನ ಧನದ ಸಹಕಾರ ದೊಂದಿಗೆ ಭವ್ಯ ಆಶ್ರಮ ಶೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ.ಸ.ಸ.ಮಹಾದೇವ ಮಹಾರಾಜರು ಭೂಕೈಲಾಸ ಮಂದಿರ ನಂದಗಾಂವ,ಶ್ರೀ ಗುರುಪಾದ ಮಹಾಸ್ವಾಮಿ ಗಳು ತಪೋವನ ಯಂಕ್ಕಚ್ಚಿ, ಶಂಕರಪ್ಪ ಮಹಾರಾಜರು, ನಾಗಪ್ಪ ಮಹಾರಾಜರು ಗುಂಡೇವಾಡಿ ಮಾತನಾಡಿದರು.ಮಾಜಿ ಜಿ.ಪಂ.ಸದಸ್ಯರಾದ ಶ್ರೀಶೈಲ ನಾರಗೊಂಡ, ಸಂಗನಗೌಡ ಪಾಟೀಲ, ಶೇಖರ ನೇಮಗೌಡ, ಶಿವು ಗುಡ್ಡಾಪುರ, ಜಡೆಪ್ಪ ಕುಂಬಾರ,ಕುಮಾರ ಗಲಗಲಿ, ಭಾವುರಾಜ ಝಳಕಿ, ಪರಗೊಂಡ ಬಡವಗೋಳ, ಶಿವಾನಂದ ಗೋಲಬಾವಿ, ಶಿವಪ್ರಭು ಅಥಣಿ ಹಾಗೂ ಮಠದ ಸದ್ಭಕ್ತರು ಉಪಸ್ಥಿತರಿದ್ದರು. ಈ ವೇಳೆ ಮುಖಂಡರಾದ ರಘುನಾಥ ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು. ಶಶಿಕಾಂತ ಶಿವನೂರ ನಿರೂಪಿಸಿದರು

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ