Breaking News

ಹುಕ್ಕೇರಿಯಲ್ಲಿ ಆರಾಧನಾ ವೃದ್ಧಾಶ್ರಮಕ್ಕೆ ಚಾಲನೆ… ವೃದ್ಧರ ಅಸಹಾಯಕತೆಗೆ ಸಹಾಯಕವಾದ ಆಶ್ರಮ

Spread the love

ಹುಕ್ಕೇರಿಯಲ್ಲಿ ಆರಾಧನಾ ವೃದ್ಧಾಶ್ರಮಕ್ಕೆ ಚಾಲನೆ…
ವೃದ್ಧರ ಅಸಹಾಯಕತೆಗೆ ಸಹಾಯಕವಾದ ಆಶ್ರಮ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಸೃಷ್ಠಿ ಫೌಂಡೇಶನನ ವತಿಯಿಂದ ಆರಂಭಿಸಿದ “ಆರಾಧನಾ” ವೃದ್ಧಾಶ್ರಮವನ್ನು ಉದ್ಘಾಟಿಸಲಾಯಿತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂದಿರಾ ನಗರದಲ್ಲಿ ಸೃಷ್ಠಿ ಫೌಂಡೇಶನನ ವತಿಯಿಂದ ಆರಂಭಿಸಿದ “ ಆರಾಧನಾ” ವೃದ್ಧಾಶ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಾಧೀಶರಾದ ಅಸೋದೆ ಅವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ವೃದ್ಧಾಶ್ರಮಗಳ ಸಂಖ್ಯೆ ಇತ್ತಿಚೆಗೆ ಹೆಚ್ಚಾಗುತ್ತಿರುವುದು ಖೇದಕರ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಮಾನವಹಕ್ಕು ಹಿತರಕ್ಷಣಾ ಮಂಡಳದ ಬೆಳಗಾವಿ ಜಿಲ್ಲಾಧ್ಯಕ್ಷೆ ಅನುಪಮಾ ನಿರ್ವಾಣಿ ಅವರು ಮನೆಯಲ್ಲಿ ತಂದೆ ತಾಯಿಯರಿಗೆ ಆದರ ಸನ್ಮಾನ ಪ್ರೀತಿ ಸರಿಯಾಗಿ ನೀಡಿದರೇ, ಯಾರೂ ಕೂಡ ವೃದ್ಧಾಶ್ರಮದ ಪಾಲಾಗುವುದಿಲ್ಲ. ಬಿಮ್ಸ್’ನಲ್ಲಿ ಪಾಲಕರನ್ನು ಮಕ್ಕಳು ಬಿಟ್ಟು ಹೋಗುತ್ತಿರುವುದನ್ನು ನೋಡಿದರೇ, ವೃದ್ಧಾಶ್ರಮಗಳನ್ನು ನಿರ್ಮಿಸುವುದು ಒಳ್ಳೆಯದೆನಿಸುತ್ತದೆ ಎಂದರು.
ಈ ವೇಳೆ ಚಿಂಚಣಿ ಕುಟುಂಬದವರು ಹಾಗೂ ಇನ್ನುಳಿದವರು ಭಾಗಿಯಾಗಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ