Breaking News

ರಸ್ತೆ ಪಕ್ಕ ನಿಲ್ಲಿಸಿದ ಲಾರಿ ಚಕ್ರ ಕಳ್ಳತನ.

Spread the love

ಧಾರವಾಡದಲ್ಲಿ ರಸ್ತೆ ಪಕ್ಕ ನಿಲ್ಲಿಸಿದ ಲಾರಿ ಚಕ್ರ ಕಳ್ಳತನ… ಲಾರಿಯ ಚಕ್ರ ಬಿಚ್ಚಿಕೊಂಡು ಹೋದ ಖದೀಮರ ಕೃತ್ಯಕ್ಕೆ ಬೆಚ್ಚಿಬಿದ್ದ ಸ್ಥಳೀಯರು.
ರಸ್ತೆ ಪಕ್ಕ ಲಾರಿ ನಿಲ್ಲಿಸಿ ಚಾಲಕ ಮಲಗಿಕೊಂಡ ವೇಳೆ, ಖದೀಮರು ಆ ಲಾರಿಯ ಏಳು ಚಕ್ರಗಳನ್ನೇ ಬಿಚ್ಚಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ರಮ್ಯಾ ರೆಸಿಡೆನ್ಸಿ ಘಟನೆ ನಡೆದಿದೆ. ಹೊಸಪೇಟೆ ಮೂಲದ ಕಂಪೆನಿಯೊಂದು ಸಿಮೆಂಟ್ ಬ್ಲಾಕ್ ಡೆಲಿವರಿ ಕೊಡುವ ಕೆಲಸ ಮಾಡುತ್ತದೆ. ಅದೇ ರೀತಿ ಚಾಲಕ ಬ್ಲಾಕ್‌ಗಳನ್ನು ರಾತ್ರಿ ಡೆಲಿವರಿ ಕೊಟ್ಟು ಬೆಂಗಳೂರಿನತ್ತ ಹೋಗುತ್ತಿದ್ದ ಸಂದರ್ಭದಲ್ಲಿ, ಚಾಲಕನಿಗೆ ನಿದ್ರೆ ಬಂದಿದೆ ಎಂದು ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ ಮಲಗಿಕೊಂಡಿದ್ದಾನೆ.
ಈ ವೇಳೆ ಚಾಲಕನಿಗೆ ಗೊತ್ತಾಗದಂತೆ ಲಾರಿಯ ಹಿಂಬದಿಯ ಏಳು ಚಕ್ರಗಳನ್ನೇ ಖದೀಮರು ಬಿಚ್ಚಿಕೊಂಡು ಹೋಗಿದ್ದಾರೆ. ಏಳೂ ಚಕ್ರದ ಟೈರ್‌ಗಳು ಹೊಸದಾಗಿದ್ದವು.
ಅವುಗಳನ್ನು ನೋಡಿಯೇ ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ