ಗಡಿವಿವಾದವನ್ನು ಪದೇ ಪದೇ ಕೆಣಕುವ ಮಹಾರಾಷ್ಟ್ರಕ್ಕೆ ಕರ್ನಾಟಕ ಸರ್ಕಾರ ತಕ್ಕ ಉತ್ತರ ನೀಡಲಿ-ಕನ್ನಡ ಹೋರಾಟಗಾರ ಅಶೋಕ್ ಚಂದರಗಿ
ಕರ್ನಾಟಕ ಮಹಾರಾಷ್ಟ್ರ ಗಡಿವಿವಾದವನ್ನು ಮಹಾರಾಷ್ಟ್ರದಲ್ಲಿ ಪದೇ ಪದೇ ಕೆಣಕುವ ಕೆಲಸವನ್ನು ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಅದನ್ನು ಚಾಲೆಂಜ್ ಮಾಡುವ ಕೆಲಸವನ್ನು ಮಾಡದೆ ಇರುವುದು ವಿಷಾದನೀಯವೆಂದು ಕನ್ನಡ ಸಂಘಟನೆಗಳ ಅಧ್ಯಕ್ಷ ಹೋರಾಟಗಾರ ಅಶೋಕ ಚಂದರಗಿ ವಿಷಾಧ ವ್ಯಕ್ತಪಡಿಸಿದರು.
ಈ ಕುರಿತು ಗುರುವಾರ ಮಾಧ್ಯಮ ಘೋಷ್ಠಿಯಲ್ಲಿ ಮಾತನಾಡಿದವರು ಈ ನಿಟ್ಟಿನಲ್ಲಿ ಮಹಾರಾಷ್ಟ್ರದವರು ಮಹಾತ್ಮ ಪುಲೆ ಆರೋಗ್ಯ ಯೋಜನೆ ತಂದರು ನಾವು ಹೋರಾಟ ಮಾಡಿ ಅದನ್ನು ತಡೆದೆವು ಆದರೆ ಈಗ ಅದನ್ನು ಆನ್ಲೈನ್ ಮಾಡಿದ್ದಾರೆ ಹೀಗಿದ್ದರೂ ಅದನ್ನು ತಡೆಯುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡುತ್ತಿಲ್ಲ ಮಹಾರಾಷ್ಟ್ರದ ಸದನದಲ್ಲಿ ಶಾಸಕರು ಕೇಳಿದ ಪ್ರಶ್ನೆಗೆ ಉತ್ತರ ಬಂದಿದ್ದು ಕರ್ನಾಟಕದ 860 ಹಳ್ಳಿಗಳಲ್ಲಿ ಅದರಲ್ಲಿಯೇ ಮರಾಠಿ ಪ್ರಾವೆಲ್ಲದ ಹಳ್ಳಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ 321 ಮಂದಿ ಅರ್ಜಿ ಹಾಕಿದ್ದಾರೆ ಇದು ಕನ್ನಡಿಗರ ಮೇಲೆ ಮರಾಠಿಗರು ಪ್ರಾಬಲ್ಯವನ್ನು ಸಾಧಿಸಿ ಮಹಾರಾಷ್ಟ್ರದ ಕಡೆಗೆ ಆಕರ್ಷಿಸುವ ಹುಣ್ಣಾರವಾಗಿದೆ.
ಎಲ್ಲ ರೀತಿಯಿಂದ ನಡೆಯುತ್ತಿರುವ ಮರಾಠಿಗರ ಮಹಾರಾಷ್ಟ್ರದ ದೌರ್ಜನ್ಯಗಳನ್ನು ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಸಚಿವರು ಸರ್ಕಾರ ಪೌರವಹಿಸುತ್ತಿದ್ದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಇದಕ್ಕೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಮಹಾರಾಷ್ಟ್ರ ಸರ್ಕಾರಕ್ಕೆ ಕನ್ನಡಿಗರ ವಿರುದ್ಧ ಅಥವಾ ಭಾಷಾ ಸಮಸ್ಯೆ ಪೂರ್ತಿ ಏನಾದರೂ ದೂರುಗಳು ಬಂದರೆ ಅವರು ತಕ್ಷಣಕ್ಕೆ ಸ್ಪಂದಿಸುತ್ತಾರೆ.
ಆದರೆ ನಮ್ಮಲ್ಲಿ ಹಾಗಿಲ್ಲ ಗಡಿಭಾಗದ ಕನ್ನಡಿಗರನ್ನು ಅವರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಗಡಿ ಸಂರಕ್ಷಣೆ ಆಯೋಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದವು ಬೆಳಗಾವಿಗೆ ಬಂದು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಈ ಕುರಿತು ನನಗೆ ವಿಶಾಧವೆನಿಸುತ್ತದೆ ಮಹಾರಾಷ್ಟ್ರಕ್ಕೆ ಉತ್ತರ ಶಿವ ಯಾವುದೇ ಕಾರ್ಯ ಚಟುವಟಿಕೆಗಳು ಸರ್ಕಾರದಿಂದ ನಡೆಯುತ್ತಿಲ್ಲ ಬಿಡಿ ಭಾಗದ ಕನ್ನಡಿಗರಿಗೆ ಇದರಿಂದ ಅನಾಥ ಪ್ರಜ್ಞೆ ಮೂಡುತ್ತಿದೆ
ಸುವರ್ಣಸೌಧದಲ್ಲಿ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ತೆರೆಯಬೇಕು ಇದಕ್ಕೆ ಗಡಿ ಉಸ್ತುವಾರಿ ಮಂತ್ರಿಗಳು ಸಹ ಬೇಕು ದೆಹಲಿಗೆ ಹೋಗಿ ಕಾನೂನು ತಂಡದೊಂದಿಗೆ ಚರ್ಚಿಸುವುದು ನಡೆಯುತ್ತಿಲ್ಲ ಸರ್ಕಾರ ಇನ್ನು ಮುಂದಾದರು ಎಚ್ಚೆತ್ತುಕೊಂಡು ಈ ಸಮಸ್ಯೆಗಳನ್ನು ಬಗೆಹರಿಸಿ ಗಡಿ ಕನ್ನಡಿಗರ ಮತ್ತು ಕನ್ನಡ ಹಿತವನ್ನು ಕಾಪಾಡಬೇಕೆಂದು ಅವರು ಹೇಳಿದರು
Laxmi News 24×7