ಬೆಳಗಾವಿ ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಘಟಪ್ರಭಾ ಎಡದಂಡೆ, ಬಲದಂಡ, ನದಿಗೆ ಹುಕ್ಕೇರಿ ಕೊಟವಾಗಿ ಯಾತ ನೀರಾವರಿ ಎಡದಂಡೆ ಕಾಲುವೆ ನೀರು ಹರಿಸಲೇಬೇಕಾದ ಅನಿವಾರ್ಯ ಇದೆ. ಕೋಳವೆ ಬಾಂವಿ ಬೋರುಗಳು ಬತ್ತಿ ಹೋಗಿವೆ ಹಾಗೂ ದನಕರುಗಳಿಗೆ ಜಾನುವಾರುಗಳಿಗೆ ತುಂಬಾ ನೀರಿನ ಕೊರತೆ ಇರುವುದರಿಂದ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಬೇಸಗೆ ಕಾಲದಲ್ಲಿ ಜನ ಜಾನೂವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು ತಕ್ಷಣ ನೀರು ಹರಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಪ್ರಕಾಶ ನಾಯಕ, ರಾಘವೇಂದ್ರ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7