ಬಾಕಿ ಉಳಿದಿರುವ ಅಲ್ಪ ಹಣದ ಕಂತನ್ನು ತುಂಬಲು ಮೈಕ್ರೋ ಫೈನಾನ್ಸ್ ನವರು ತುಂಬಾ ಕಿರುಕುಳ ಹಿಂಸೆ ನೀಡುತ್ತಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚನ್ನಮ್ಮನ ಕಿತ್ತೂರಿನ ಮಹಿಳೆಯರು ಬುಧವಾರ ಡಿಸಿಗೆ ಮನವಿ ಅರ್ಪಿಸಿದರು
ಮೈಕ್ರೋ ಫೈನಾನ್ಸ್ ನವರಿಂದ ಮಹಿಳೆಯರಿಗೆ ಕಿರುಕುಳ ಮಾತೃ ತಪ್ಪಿಲ್ಲ ಸರ್ಕಾರದ ಆಜ್ಞೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಿರುಕುಳ ಸಹಿಸಲಾರದೆ ಇಂದು ಮಹಿಳೆಯರು ಬೆಳಗಾವಿಗೆ ಆಗಮಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಅವರಿಂದ ನಮಗೆ ತುಂಬಾ ಹಿಂಸೆ ಮತ್ತು ಕಿರುಕುಳವಾಗುತ್ತಿದೆ. ಪತಿಗೆ ಆರೋಗ್ಯ ಸರಿ ಇಲ್ಲ ಕಾಲಾವಕಾಶ ನೀಡಿ ಎಂದು ಕೇಳಿದರೂ ಎಷ್ಟು ಹೇಳಿದರೂ ಕೇಳುತ್ತಿಲ್ಲ ಮನೆಗೆ ಬಂದು ಕುಳಿತುಕೊಳ್ಳುತ್ತಿದ್ದಾರೆ ಕಳೆದ 20 ವರ್ಷಗಳಿಂದ ನಾವು ಸಾಲ ತೆಗೆದುಕೊಳ್ಳುವುದು ತುಂಬುವುದನ್ನು ಸರಿಯಾಗಿ ಮಾಡಿದ್ದೇವೆ ಈಗ ನನ್ನ ಪತಿಗೆ ಆರೋಗ್ಯ ಸರಿ ಇಲ್ಲ ತೊಂದರೆ ಆಗಿದೆ ಎಂದು ಹೇಳಿದರೂ ಮನೆಗೆ ಬಂದು ಕುಳಿತುಕೊಂಡು ಹಣ ಕಟ್ಟಲೇಬೇಕೆಂದು ಪಟ್ಟು ಹಿಡಿಯುತ್ತಾರೆ. ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ರದ್ದಾಗುತ್ತದೆ ಎಂದು ಹೆದರಿಸುತ್ತಾರೆ ಎಲ್ ಅಂಡ್ ಟಿ ಧರ್ಮಸ್ಥಳ ಸಂಘ ಸೇರಿದಂತೆ ಎಲ್ಲಾ ಸಂಘದಿಂದ ಹಣ ತೆಗೆದುಕೊಂಡಿದ್ದು ಈಗಾಗಲೇ ಅರ್ಧ ತುಂಬಲಾಗಿದೆ ಆದರೂ ಎಲ್ಲಾ ಫೈನಾನ್ಸ್ ನವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ತಶೀಲ್ದಾರರಿಗೆ ಜಿಲ್ಲಾಧಿಕಾರಿಗಳಿಗೆ ಎಸ್ ಪಿ ಅವರಿಗೆ ತಿಳಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಎಂದು ಮಾಧ್ಯಮಗಳ ಮುಂದೆ ಅಕ್ಕ ಮಹಾದೇವಿ ಮಡಿವಾಳರ ತಮ್ಮ ಅಳಿಲು ತೋಡಿಕೊಂಡರು .
ತೊಂದರೆಗೀಡಾದ ಮತ್ತೊಬ್ಬ ಮಹಿಳೆ ಮಾತನಾಡಿ ಬೆಳಿಗ್ಗೆಯೇ ಬಂದು ಮನೆಯಲ್ಲಿ ಕುಳಿತುಕೊಂಡು ತುಂಬಲೇಬೇಕೆಂದು ಅಗ್ರಹಿಸುತ್ತಾರೆ. ಮಂಗಲ ಸೂತ್ರವನ್ನು ಅಡವಿಟ್ಟು ಎಲ್ಲಾ ಕಂತುಗಳನ್ನು ಸರಿಯಾಗಿ ತುಂಬುತ್ತಲೇ ಬಂದಿದ್ದೇವೆ ಕೇವಲ ಒಂದು ಕಂತು ಬಾಕಿ ಇದ್ದದ್ದಕ್ಕೆ ಮನಬಂದಂತೆ ನಿಂದಿಸಿ ಹಿಂಸೆ ನೀಡುತ್ತಿದ್ದಾರೆ. ಇನ್ನು ಮುಂದೆ ನಾವು ಹಣವನ್ನು ಕಟ್ಟುವುದಿಲ್ಲ ಯಾವುದಕ್ಕೂ ಹೆದರುವುದಿಲ್ಲವೆಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿದ್ದ ಕಿರುಕುಳಕ್ಕೆ ಒಳಗಾದ ಮಹಿಳೆಯರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಸರ್ಕಾರದ ಆದೇಶದಂತೆ ಸಂಬಂಧಪಟ್ಟ ಇಲಾಖೆಗಳು ಕಿರುಕುಳ ತಪ್ಪಿಸಿ ರಕ್ಷಣೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
Laxmi News 24×7