ಚಿಕ್ಕಮಗಳೂರು, (ಮಾರ್ಚ್ 19): ಅಮ್ಮನಿಗೆ ಬೈದಿದ್ದಕ್ಕೆ ತನ್ನ ಮಾವನನ್ನೇ ಕೊಂದಿರುವ (Murder) ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಂಚನಹಳ್ಳಿ ಸಾಹುಕಾರ ಎಂದೇ ಖ್ಯಾತಿ ಪಡೆದಿದ್ದ
ಗಂಗಾಧರೇಗೌಡ ಅವರ ಮಗ ಸಿದ್ದರಾಮೇಗೌಡ ಅವರನ್ನು ಮಾರ್ಚ್ 15 ರ ಬೆಳಗ್ಗೆ ಹೆಣವಾಗಿ ಬಿದ್ದಿದ್ದ, ಸಿದ್ದರಾಮೇಗೌಡನ ಕುತ್ತಿಗೆ ಸುತ್ತ ರಕ್ತದ ಕಲೆಯಿದ್ದು, ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿತ್ತು.
ಈ ಹತ್ಯೆ ಪಂಚನಹಳ್ಳಿ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಅಷ್ಟಕ್ಕೂ ಸಾಹುಕಾರನ ಮಗ ಸಿದ್ದರಾಮೇಗೌಡನ ಮರ್ಡರ್ ಹಿಂದೆ ಇದ್ದಿದ್ದು ಸಾಹುಕಾರನ ಮೊಮ್ಮಗನೇ.ಹೌದು ಪಂಚನಹಳ್ಳಿ ಗ್ರಾಮದ ಗಂಗಾಧರೇಗೌಡನಿಗೆ ಐವರು ಮಕ್ಕಳು. ಮಗ ಸಿದ್ದರಾಮೇಗೌಡ ಮತ್ತು ಆತನ ಅಕ್ಕ ನಿರ್ಮಲ ನಡುವೆ 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ, ಸೈಟ್ ವಿಚಾರವಾಗಿ ವಿವಾದವಿತ್ತು.
ತಂದೆಯ ಆಸ್ತಿಗಾಗಿ ನಿರ್ಮಲ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದರು. ಇದೇ ವಿಚಾರವಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಅಕ್ಕ ನಿರ್ಮಲ ,ತಮ್ಮ ಸಿದ್ದರಾಮೇಗೌಡ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ವೇಳೆ ಅಕ್ಕ ನಿರ್ಮಲಳಿಗೆ ಅವಾಚ್ಯ ಪದ ಬಳಸಿ ಬೈದಿದ್ದ. ಇದರಿಂದ ಕೋಪಗೊಂಡಿದ್ದ ನಿರ್ಮಲಾಳ ಮಗ ಸಂಜಯ್, ತನ್ನ ಮಾವ ಸಿದ್ದರಾಮೇಗೌಡನನ್ನು ಹತ್ಯೆ ಮಾಡಿದ್ದಾನೆ.
Laxmi News 24×7