Breaking News

ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ.

Spread the love

ಚಿಕ್ಕಬಳ್ಳಾಪುರ, ಮಾರ್ಚ್​ 19: ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ.

ನಿತ್ಯ ಬೆಳಗಾದರೆ ಕೆಲ ಅಂಗಡಿ ಮತ್ತು ಮನೆಗಳ ಮುಂದೆ ನಿಂಬೆಹಣ್ಣು, ಅರಿಶಿನ ಮತ್ತು ಕುಂಕಮ ಇರುತ್ತಿದ್ದು ಮಾಟಮಂತ್ರದ ಕುರುಹುಗಳು ಎನ್ನಲಾಗುತ್ತಿದೆ. ಇದೇ ರಸ್ತೆಯಲ್ಲಿರುವ ಶಾಂತಕುಮಾರ್ ಎಂಬುವರ ಟೈಲರಿಂಗ್ ಅಂಗಡಿ ಮುಂದೆ ಪ್ರತಿ ದಿನವೂ ಒಂದಲ್ಲ ಒಂದು ನಿಂಬೆಹಣ್ಣಿನ ತುಂಡುಗಳು, ಹರಿಶಿನ ಕುಂಕುಮದ ಕುರುಹುಗಳು ಪತ್ತೆಯಾಗುತ್ತಿದ್ದವಂತೆ.

ಇದರಿಂದ ಆತಂಕಗೊಂಡ ಟೈಲರ್ ಶಾಂತಕುಮಾರ್ ಅವರು ಈ ರೀತಿ ಮಾಡುತ್ತಿರುವುದು ಯಾರು ಅಂತ ಪತ್ತೆ ಹಚ್ಚಲು ಅಂಗಡಿ ಮುಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು. ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಎರಡೇ ದಿನಕ್ಕೆ ಎದುರುಗಡೆ ಮನೆಯ ಮಹಿಳೆ ಮುನಿಲಕ್ಷ್ಮಮ್ಮ ಅವರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದಿದೆ.

ಇದಾದ ಬಳಿಕ ಟೈಲರ್ ಶಾಂತಕುಮಾರ್ ಅವರ ಮನೆಯವರಿಗೆ ಒಂದಾಲ್ಲ ಒಂದು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆಯಂತೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ