Breaking News

ಜಲನಿಗಮಗಳಿಗೆ ಕೇಂದ್ರ ನೀಡಿದ್ದು ಬಡ್ಡಿರಹಿತ ಸಾಲ…ಅನುದಾನವಲ್ಲ…

Spread the love

ಜಲನಿಗಮಗಳಿಗೆ ಕೇಂದ್ರ ನೀಡಿದ್ದು ಬಡ್ಡಿರಹಿತ ಸಾಲ…ಅನುದಾನವಲ್ಲ…
ಸದನಕ್ಕೆ ತಪ್ಪು ಮಾಹಿತಿ ನೀಡದಿರಿ…ಯತ್ನಾಳ ವಿರುದ್ಧ ಗುಡುಗಿದ ಸಿದ್ಧರಾಮಯ್ಯ…
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಜಲ ನಿಗಮಗಳಿಗೆ ನೀಡಿದ್ದು, ಕೇವಲ 1030 ಕೋಟಿ ಬಡ್ಡಿರಹಿತ ಸಾಲ. ಅದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೆಂದ್ರ ಸರ್ಕಾರ ರಾಜ್ಯಕ್ಕೆ 10 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆಂದು ಎಂದು ಸಿಎಂ ಸಿದ್ಧರಾಮಯ್ಯ ಸದನಕ್ಕೆ ಹೇಳುತ್ತಿದ್ದಂತೆ ಯತ್ನಾಳ ಮೊದಲೂ ರಾಜ್ಯ ಸರ್ಕಾರ ಕೃಷ್ಣಾ ಜಲನಿಗಮಕ್ಕೆ ಬಜೆಟಿನಲ್ಲಿ ಎಷ್ಟು ಅನುದಾನ ನೀಡಿದೆ ಅದನ್ನು ಮೊದಲೂ ಸ್ಪರ್ಷಪಡಿಸಲಿ ಎಂದರು.
ಶಾಸಕ ಯತ್ನಾಳ ಅವರು ಸದನಕ್ಕೆ ಭಾರಿ ಸುಳ್ಳನ್ನು ಹೇಳಿದ್ದಾರೆ.ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2000 ಕೋಟಿ ನೀಡಿದೆ ಎಂದಿದ್ದಾರೆ. ಅಲ್ಲದೇ ನೀರಾವರಿ ನಿಗಮಕ್ಕೆ 2000 ಕೋಟಿ, ವಿಶ್ವೇಶ್ವರಯ್ಯ ಜಲನಿಗಮಕ್ಕೆ 3000 ಕೋಟಿ, ಹಾಗೂ ಕಾವೇರಿ ನಿಗಮಕ್ಕೆ 3000 ಕೋಟಿ ಒಟ್ಟು 10 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದಿದ್ದಾರೆ. ಆದರೇ ವಾಸ್ತವದಲ್ಲಿ ಕೇಂದ್ರ ಸರ್ಕಾರ ಬಡ್ಡಿ ರಹಿತ ಸಾಲವನ್ನು ನೀಡಿದೆ.
ಇದು ಅನುದಾನವಲ್ಲ. ಮುಳುವಾಡ ಏತ ನೀರಾವರಿಗೆ 200 ಕೋಟಿ ನೀಡಲಾಗಿದೆ. ಮಂಟೂರು ಮಹಾಲಕ್ಷ್ಮೀ ಯೋಜನೆಗೆ 200 ಕೋಟಿ, ಭದ್ರಾ ಯೋಜನೆಗೆ, 300 ಕೋಟಿ, ವಿಶ್ವೇಶ್ವರಯ್ಯಾ ನಾಲಾ ಅಗಲಿಕರಣಕ್ಕೆ 330 ಕೋಟಿ ಸೇರಿದಂತೆ ಒಟ್ಟು 1000 ಕೋಟಿ 1030 ಕೋಟಿ ನೀಡಿದ್ದಾರೆ. 10 ಸಾವಿರ ಕೋಟಿ ಎಲ್ಲಿಂದ ಬಂತು? ನಿಮಗೆ ಮಾಹಿತಿ ಕೊರತೆಯಿದೆ ಎಂದು ಹೇಳಿದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಕೃಷ್ಣ ಜಲ ನಿಗಮಕ್ಕೆ ಎಷ್ಟು ಹಣ ಇಟ್ಟಿದ್ದಿರೆಂದು ಮೊದಲು ಬಹಿರಂಗಪಡಿಸಲಿ. ಅಂಕಿ ಅಂಶಗಳ ಮೂಲಕ ಮಾಹಿತಿ ನೀಡುತ್ತೇನೆ ಎಂದರು. ಇದಕ್ಕೆ ಸಿಎಂ ಸಿದ್ಧರಾಮಯ್ಯ ಹೀಗೆಂದು ಸದನಕ್ಕೆ ತಪ್ಪು ಮಾಹಿತಿ ನೀಡುವುದು ಸರಿಯೇ? ಎಂದರು. ಅಲ್ಲದೇ, ಮುಂದೆ ನೀವು ಮುಖ್ಯಮಂತ್ರಿ ಆಗುವ ಆಸೆ ಇಟ್ಟಿಕೊಂಡವರು. ಕೇಂದ್ರದಲ್ಲಿ ಮಂತ್ರಿ ಇದ್ದವರೂ ಎನ್ನುತ್ತಿದ್ದಂತೆ ಮತ್ತೇ ಗದ್ದಲ ಉಂಟಾಯಿತು.
ಇನ್ನು ಈ ಕುರಿತು ಬಜೆಟ್ ಮೇಲೆ ಚರ್ಚೆಯ ವೇಳೆ ಹೇಳುವುದಾಗಿ ಶಾಸಕ ಯತ್ನಾಳ ತಿಳಿಸಿದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ