Breaking News

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 134 ನೇ ಜಯಂತಿ ಉತ್ಸವ ಕುರಿತು ಸಂಘಟನೆಗಳಿಂದ ಪೂರ್ವಭಾವಿ ಸಭೆ

Spread the love

ಡಾ.ಅಂಬೇಡ್ಕರ್ ಜಯಂತಿ: ಸಂಘಟನೆಗಳಿಂದ ಪೂರ್ವಭಾವಿ ಸಭೆ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 134 ನೇ ಜಯಂತಿ ಉತ್ಸವ ಕುರಿತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ರವಿವಾರ ಮಹಾಮಂಡಳ ದಿಂದ ಪೂರ್ವಭಾವಿ ಸಭೆ ಜರುಗಿತು
ಮಹಾಮಂಡಳ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಹಿಳಾ ಕಾರ್ಯಕರ್ತರು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಿದರು. ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡ ಮಲ್ಲೇಶ ಚೌಗಲೆ ಅವರು ಜಯಂತಿ ಉತ್ಸವದ ಕುರಿತು ಮಾಹಿತಿ ನೀಡಿ, ಈ ವರ್ಷದಿಂದ ಸಣ್ಣ ಬದಲಾವಣೆ ಮಾಡಲಾಗಿದ್ದು,ಛತ್ರಪತಿ ಧರ್ಮವೀರ ಸಂಭಾಜಿ ಚೌಕದ ಹತ್ತಿರದಲ್ಲಿ ಇರುವ ಕಂಟೋನ್ಮೆಂಟ್ ಬೋರ್ಡ್ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ವೃತ್ತದಿಂದ ಮುಂಜಾನೆ 9:00ಗೆ ಭೀಮ ಜ್ಯೋತಿಯಾತ್ರೆ ಆರಂಭಗೊಂಡು ಕಿಲ್ಲಾ ಅಶೋಕ ವೃತ್ತ, ಮಾರ್ಕೆಟ್ ಪೊಲೀಸ್ ಸ್ಟೇಷನ್,
ಕಸಾಯಿ ಗಲ್ಲಿ, ಚವಾಟ ಗಲ್ಲಿ ಮೂಲಕ ಸಂಚರಿಸಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನಕ್ಕೆ ಬರಲಿದೆ. ನಂತರ 9:30ಕ್ಕೆಜಿಲ್ಲಾ ಆಡಳಿತದ ಪರವಾಗಿ ಜಿಲ್ಲಾಧಿಕಾರಿಯವರು ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ ಈ ಸಂದರ್ಭದಲ್ಲಿ ಪೊಲೀಸ ವರಿಷ್ಠಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು ಅಂಬೇಡ್ಕರ್ ನಗರದ ಬುದ್ಧ ವಿಹಾರದಲ್ಲಿರುವ ಡಾ. ಬಾಬಾ ಸಾಹೇಬ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇತರೇ ಅಧಿಕಾರಿಗಳ ಆಡಳಿತ ವರ್ಗ ಉಪಸ್ಥಿತರಿರುತ್ತಾರೆ.
ನಂತರ ಮಹಾಮಂಡಳದವರು , ವಿವಿಧ ಸಂಘಟನೆಗಳವರು ವಾಹನಗಳನ್ನು ಅಲಂಕಾರ ಮಾಡಿಕೊಂಡು ವಾದ್ಯ ಮೇಳಗಳೊಂದಿಗೆ ಕಾಂಟೋನ್ಮೆಂಟ್ ಬೋರ್ಡ್ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು 12 ಗಂಟೆಗೆ ಅಲ್ಲಿಂದ ಜಯಂತಿ ಉತ್ಸವ ಮೆರವಣಿಗೆ ಆರಂಭಗೊಂಡು ಡಾ. ಅಂಬೇಡ್ಕರ್ ಉದ್ಯಾನವನವನ್ನು ನಾಲ್ಕು ಗಂಟೆಗೆ ಸೇರಲಿದೆ. ನಂತರ ಇಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಜಿಲ್ಲಾ ಆಡಳಿತದಿಂದಲೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಲ್ಲಾ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಉತ್ಸವ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮಾರ್ಚ್ 17ರಂದು ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಮುಂಜಾನೆ 11ಕ್ಕೆ ಡಾ. ಬಾಬು ಜಗಜೀವನ ರಾಮ್ ಜಯಂತಿ ಹಾಗೂ 12 ಗಂಟೆಗೆ ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಕುರಿತು ಪೂರ್ವಭಾವಿ ಸಭೆ ನಡೆಯಲಿದ್ದು ಎಲ್ಲರೂ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದರು
ಈ ಸಂದರ್ಭದಲ್ಲಿ ವಿವಿಧ ಮುಖಂಡರು ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ