ಭಾರತ ತಂಡಕ್ಕೆ ಮಕ್ಕಳಿಂದ ಶುಭ ಹಾರೈಕೆ
ಬಳ್ಳಾರಿ: ದುಬೈನ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ವಿಜಯ ಪತಾಕೆ ಹಾರಿಸಲೆಂದು ದೇಶಾದ್ಯಂತ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಬಳ್ಳಾರಿಯ ಶ್ರೀ ವಾಸವಿ ಎಜ್ಯುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಶ್ರೀ ವಾಸವಿ ವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಟೀಂ ಇಂಡಿಯಾ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.ಭಾರತ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳಲಿ ಎಂದು ಪುಟಾಣಿ ಮಕ್ಕಳು ರಾಷ್ಟ್ರ ಧ್ವಜ, ಟೀಂ ಇಂಡಿಯಾ ಆಟಗಾರರ ಭಾವಚಿತ್ರ, ಕೋಚ್ ಭಾವಚಿತ್ರ, ಐಸಿಸಿ ಟ್ರೋಫಿ ಭಾವಚಿತ್ರ, ಬ್ಯಾಟ್, ಬಾಲ್ ಮತ್ತು ವಿಕೆಟ್ ಹಿಡಿದುಕೊಂಡು ವಾಸವಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಶುಭ ಕೋರಿದರು.ಶಾಲೆಯ ಸಿಬ್ಬಂದಿ ವರ್ಗದಿಂದ ರಚಿತವಾದ ವಿಶೇಷ ಹಾಗೂ ವಿಶಿಷ್ಟವಾದ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಕುರಿತಾದ ಗೀತೆಯನ್ನು ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಲಾವಣ್ಯ ಹಾಡಿದರು. ಅಲ್ಲದೇ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾದ ವೃಶಾಂಕ್ ತನ್ನ ಸೃಜನಶೀಲತೆಯಿಂದ ತಯಾರಿಸಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
Laxmi News 24×7