ಸಮಸಮಾನ ನಿರ್ಮಿಸಲು ಮಹಿಳೆಯರೇ ಶ್ರಮಿಸಬೇಕು; ಡಾ. ಸೋನಾಲಿ ಸರ್ನೋಬತ್
ಮಹಿಳೆಯರು ಅಬಲೆಯಲ್ಲ ಸಬಲೆ. ಸಮಾಜದಲ್ಲಿ ಉಂಟಾಗುತ್ತಿರುವ ಗಂಡು ಹೆಣ್ಣಿನ ಕೊರತೆಯನ್ನು ನೀಗಿಸಲು ಪ್ರತಿಯೊಬ್ಬರು ಜಾಗೃತರಾಗಿ ಹೆಣ್ಣು ಮಗುವಿನ ಸಂಖ್ಯೆಗಳನ್ನು ಕಡಿಮೆಗೊಳಿಸದಂತೆ ಡಾ. ಸೋನಾಲಿ ಸರ್ನೋಬತ್ ಹೇಳಿದರು.
ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಸಂಘ ಮಹಿಳಾ ಘಟಕದ ಉದ್ಘಾಟನೆ ಮತ್ತು ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷೆ ಸುನೀತಾ ಪಟ್ಟಣಶೆಟ್ಟಿ ಮತ್ತು ಗೌರವಾಧ್ಯಕ್ಷೆ ಅನಿತಾ ಮಿರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ನಿಯತಿ ಫೌಂಡೇಶನನ ಸಂಸ್ಥಾಪಕಿ ಡಾ. ಸೋನಾಲಿ ಸರ್ನೋಬತ್ ಮಾತನಾಡಿದರು. ಭಾರತದ ಮೇಲೆ 900 ವರ್ಷಗಳ ಕಾಲ ಆಂಗ್ಲರು ರಾಜ್ಯವನ್ನು ಮಾಡಿದರು. ಆದರೇ, ಅವರ ದಾಸ್ಯದಿಂದ ದೇಶವನ್ನು ಬಿಡುಗಡೆ ಮಾಡಲು ಮಹಿಳೆಯರೇ ಹೋರಾಡಿದ್ದನ್ನು ಸ್ಮರಿಸಬಹುದಾಗಿದೆ. ನಮ್ಮ ಸನಾತನ ಧರ್ಮದಲ್ಲಿ ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ಹೇಳಲಾಗಿದೆ.
ಎಲ್ಲ ಕ್ಷೇತ್ರದಲ್ಲಿಯೂ ಈಗೀನ ಕಾಲದಲ್ಲಿ ಮಹಿಳೆಯರು ಪ್ರಗತಿಯನ್ನು ಸಾಧಿಸಿದ್ದಾರೆ. ಹೆಣ್ಣು ಮಗು ಬೇಡ ಎಂದೂ ಕೇವಲ ಗಂಡು ಮಗುವಿಗೆ ಪ್ರಾಧಾನ್ಯತೆ ನೀಡಿ, ಈಗೀನ ಯುವಕರಿಗೆ ಮದುವೆಯಾಗಲೂ, ಹೆಣ್ಣಿನ ಕೊರತೆ ಉಂಟಾಗುತ್ತಿದೆ. ಮಹಿಳಾ ಮಂಡಳಗಳು ವಧುವರ ಸೂಚಕ ಕೇಂದ್ರಗಳನ್ನು ಆರಂಭಿಸಬೇಕು. ಗಂಡು ಮತ್ತು ಹೆಣ್ಣು ಸರಿಸಮಾನವಾಗಿರಬೇಕೆಂದು ಪ್ರಕೃತಿಯ ನಿಯಮ ಎಂದರು.
ವೇದಿಕೆಯ ಮೇಲೆ ಮಾಜಿ ಸಂಸದೆ ಮಂಗಲ್ ಅಂಗಡಿ, ಡಾ. ಪ್ರೀಯಾ ಪುರಾಣಿಕ, ಮಂಗಲ ಮಠದ, ಕರ್ನಲ್ ಪಿಜಿಜಿ ಸುಂದರಿ, ಜಗದೀಶ ಪೂಜೇರಿ, ರಮೇಶ ಚೌಗಲಾ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
Laxmi News 24×7