Breaking News

ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

Spread the love

ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನಬೆಚ್ಚಿ ಬಿದ್ದ ಗ್ರಾಮಸ್ಥರು
ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಖಾನಾಪೂರ ತಾಲೂಕಿನ ಭಂಡರಗಾಳಿ,ಬರಗಾಂವ, ಸಣ್ಣ ಹೊಸೂರು, ಗರ್ಲಗುಂಜಿ, ಶೇಡೆಗಾಳಿಯಲ್ಲಿ ಕಳ್ಳರು ಮನೆಗಳ ಬೀಗ್ ಮುರಿದು ತನ್ನ ಕೈಚಳಕ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ಕದ್ದೋಯ್ದ ಘಟನೆ ನಡೆದಿದೆ.
ಬರಗಾಂವದಲ್ಲಿ ನಾಲ್ಕು ಮನೆಗಳ ಬೀಗಗಳನ್ನು ಮುರಿದ ಕಳ್ಳರು, ಭಂಡರಗಾಳಿಯಲ್ಲಿ ಒಂದು ಮನೆ, ಸಣ್ಣ ಹೊಸೂರಿನಲ್ಲಿ ಎರಡು ಮನೆಗಳನ್ನು ಕಳ್ಳತನ ಮಾಡಿದ್ದಾರೆ.
ಆಯಾ ಮನೆಗಳಲ್ಲಿ ಎಷ್ಟು ಕಳ್ಳತನವಾಗಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆತಿಲ್ಲ.
ಇದರಲ್ಲಿ ಮಾರುತಿ ದೇಸಾಯಿ ಅವರ ಮನೆಯಿಂದ ಎರಡುವರೆ ತೊಲೆ ಚಿನ್ನದ ಮಾಂಗಲ್ಯ ಸರವನ್ನು ಕಳುವು ಮಾಡಿರುವ ಮಾಹಿತಿ ದೊರೆತಿದೆ. ಆದರೇ, ಇಲ್ಲಿಯವರೆಗೂ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲವೆಂದು ಹೇಳಲಾಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ