Breaking News

ಪರೀಕ್ಷೆಯಲ್ಲಿ ಮೇಲ್ವಿಚಾರಕ ವಿದ್ಯಾರ್ಥಿನಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಆರೋಪ ಗಳಗಳನೇ ಅತ್ತ

Spread the love

ದಾವಣಗೆರೆ, (ಮಾರ್ಚ್​ 03): ಈಗಾಗಲೇ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇಂದು (ಮಾರ್ಚ್ 03) ಸೈನ್ಸ್​ ವಿಭಾಗದ ಮ್ಯಾಥ್ಸ್​(ಗಣಿತ) ಪರೀಕ್ಷೆ ಇತ್ತು. ಪರೀಕ್ಷೆಯಲ್ಲಿ ಮೇಲ್ವಿಚಾರಕ ವಿದ್ಯಾರ್ಥಿನಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಆರೋಪ ಕೇಳಿಬಂದಿದೆ.

ದಾವಣಗೆರೆ ಜಿಲ್ಲೆ ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಜಗಳೂರಿನ ನಳಂದ ಕಾಲೇಜಿನ ಪಿಯು ವಿದ್ಯಾರ್ಥಿನಿ ಸೌಜನ್ಯ, ಹೆಚ್ಚುವರಿ ಉತ್ತರ ಪತ್ರಿಕೆ(ಎಡಿಷನಲ್​ ಶೀಟ್​) ನೀಡುವಂತೆ ಮೇಲ್ವಿಕಾರಕನಿಗೆ ಕೇಳಿದ್ದಾಳೆ.

ಆದ್ರೆ, ಮೇಲ್ವಿಚಾರಕ ಎಡಿಷನಲ್​ ಶೀಟ್ ನೀಡಲು ನಿರಾಕರಿಸಿದ್ದಾನೆ. ಇದರಿಂದ ಸೌಜನ್ಯ 7 ಅಂಕಗಳಿಗೆ ಉತ್ತರ ಬರೆಯುವುದನ್ನು ಬಿಟ್ಟು ಬಂದಿದ್ದಾಳೆ.

ಅಲ್ಲದೇ ಪರೀಕ್ಷೆ ಬಳಿಕ ತನ್ನ ತಾಯಿ ಹತ್ತಿರ ಬಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಇನ್ನು ಮಗಳಿಗೆ ಆದ ಅನ್ಯಾಯಕ್ಕೆ ತಾಯಿಯೂ ಸಹ ಗಳಗಳನೇ ಅತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ