Breaking News

ಸೈಕಲ್ ಏರಿ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಅಭಯ್ ಪಾಟೀಲ್

Spread the love

ಸೈಕಲ್ ಏರಿ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಅಭಯ್ ಪಾಟೀಲ್

ಸೈಕಲ್ ತುಳಿದು ಜನರ ಸಮಸ್ಯೆ ಆಲಿಸಲು ಬಂದ ಶಾಸಕರು

ತಮ್ಮದೇಯಾದ ವಿಶಿಷ್ಟತೆಗೆ ಖ್ಯಾತಿಯಾದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಇಂದು ಸೈಕಲ್ ತುಳಿದ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದರು.

ಹೌದು, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲರು ಇಂದು ಸೈಕಲ್ ಫೇರಿ ಮೂಲಕ ವಿಶೇಷ ಅಭಿಯಾನವನ್ನು ನಡೆಸಿದರು. ವಾರ್ಡ ನಂ . 29 ಮತ್ತು 43 ರಲ್ಲಿನ ಜನರ ಮನೆ ಬಾಗಿಲಿಗೆ ಹೋದ ಶಾಸಕರು ಜನರ ಸಮಸ್ಯೆಗಳನ್ನು ತಿಳಿದುಕೊಂಡರು.

ಈ ವೇಳೆ ಜನರು ಸಂಚಾರ ದಟ್ಟಣೆಯ ಜೊತೆಗೆ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡುತ್ತಿಲ್ಲವೆಂದು ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ಟಿಳವಾಡಿಯಲ್ಲಿಯೂ ಕೂಡ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆ ಹಲವಾರು ಜನರಿಂದ ದೂರುಗಳು ಕೇಳಿಬಂದವು. ಈ ಸಂದರ್ಭದಲ್ಲಿ ನಗರಸೇವಕಿ ವಾಣಿ ವಿಲಾಸ್ ಜೋಷಿ, ನಿತಿನ್ ಜಾಧವ್, ಜಯಂತ್ ಜಾಧವ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ