Breaking News

ಏಕಕಾಲಕ್ಕೆ 2 ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ

Spread the love

ಏಕಕಾಲಕ್ಕೆ 2 ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ
ಚಿಕ್ಕೋಡಿ:ಚಿಕ್ಕೋಡಿ ನಗರದ ಹಾಲಟ್ಟಿಯ ಶ್ರೀಲಕ್ಷ್ಮೀ ದೇವಿ ಜಾತ್ರಾ ಮಹೋತ್ಸ ಅಂಗವಾಗಿ ಏಕಕಾಲಕ್ಕೆ 2 ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ದಿವ್ಯಸಾನಿಧ್ಯವನ್ನು ವಹಿಸಿದ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮೀಜಿಯವರು ಮಾತನಾಡಿ ಕುಂಕುಮ ಸೌಭಾಗ್ಯದ ಸಂಕೇತ , ಅರಿಶಿಣ ಆರೋಗ್ಯದ ಸಂಕೇತ. ಹೆಣ್ಣು ಸಾಕ್ಷಾತ ದೇವಿಯ ಸ್ವರೂಪ. ಬಣ್ಣಕ್ಕಿಂತ ಗುಣ ಮುಖ್ಯವಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ನೀಡಿ ಎಂದರು.
ಪರಮಾನಂದವಾಡಿಯ ಶ್ರೀ ಅಭಿನವ ಬ್ರಹ್ಮಾನಂದ ಮಹಾಸ್ವಾಮೀಜಿಯವರು ಮಾತನಾಡಿ ಈ ಜಗತ್ತಿನಲ್ಲಿ ಅದ್ಭುತ ಸೃಷ್ಟಿ ಎಂದರೆ ಹೆಣ್ಣು.ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೆ ತಾಯಿಗೆ ಹೊಲಿಕೆ ಮಾಡಲಾಗಿದೆ. ಜಗತ್ತಿನಲ್ಲಿ ತಾಯಿಗಿಂತ ಮಿಗಲಾದ ತ್ಯಾಗಿ ಬೇರೆ ಯಾರೂ ಇಲ್ಲ. ಎಲ್ಲರೂ ತಾಯಿಗೆ ಗೌರವಿಸಬೇಕು ಎಂದರು.
ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯ ಪ್ರಯುಕ್ತ ಶಾಸಕ ಗಣೇಶ ಹುಕ್ಕೇರಿ , ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಪುರಸಭೆಯ ಅಧ್ಯಕ್ಷ್ಯೆ ವೀಣಾ ಜಗದೀಶ ಕವಟಗಿಮಠ ಅವರು ಶ್ರೀ ಲಕ್ಷ್ಮೀ ದೇವಿಯ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀಕಾಂತ ಚನ್ನವರ್, ಸಂಜಯ ಚನ್ನವರ, ಗಣಪತಿ ದೊಡ್ಡಮನಿ, ದತ್ತ ಬಣ್ಣನವರ, ನಾರಾಯಣ ಜಮಗೌಡರ, ಅಶೋಕ್ ಚನ್ನವರ್ಲ, ಭೀಮಸೇನ ಚನ್ನವರ, ಮಲ್ಲೇಶ ಲಿಂಬಿಗಿಡದ, ಸುರೇಶ ಪಟ್ಲಿ, ಶಂಕರ ಬನ್ನನವರ, ರಮೇಶ ಚನ್ನವರ, ಗಣಪತಿ ಕಾಂಬಳೆ, ಭೀಮಸೇನ ಆರ್ಭವಿ, ಧನಪಾಲ ಧಾಮನ್ನವರ, ಸೋಮಯ್ಯ ಹಿರೇಮಠ, ಅಶೋಕ ಪೂಜಾರಿ, ಸಂತೋಷ ಜೂಗುಳೆ, ವಿಶ್ವನಾಥ ಕಾಮಗೌಡ, ಶಿವಪ್ಪ ಚೆನ್ನವರ, ಭರತ್ ಜುಗೂಳೆ, ಮಾರುತಿ ಹಿರೇಕೊಡಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರೂ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ