Breaking News

ಜಾತ್ರೆಗೆ ಹೋಗೋದಾಗಿ ಹೇಳಿದ್ದ ಮಹಿಳೆ ಶವವಾಗಿ ಪತ್ತೆ

Spread the love

ಹಾವೇರಿ, ಫೆಬ್ರವರಿ 23: ಜಾತ್ರೆಗೆ ಎಂದು ಮನೆಯಿಂದ ಹೋಗಿದ್ದ ಮಹಿಳೆ (woman) ದಾರಿ ಮಧ್ಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅರೆ ಬೆತ್ತಲಾಗಿ ಬಿದ್ದಿದ್ದಳು. ಅದನ್ನು ಕಂಡ ದೇವಸ್ಥಾನದ ಪೂಜಾರಿ ಅಲ್ಲೆ ಇದ್ದ ಭಿಕ್ಷುಕರಿಗೆ ಹೇಳಿ ಬಟ್ಟೆ ಉಡಿಸಿ ಸ್ಥಳಿಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ್ದರು.

ಆದರೆ ತೀವ್ರ ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಎಂಟು ದಿನದ ನಂತರ ಸಾವನಪ್ಪಿದ್ದಾರೆ. ಇದು ರೇಪ್ ಆ್ಯಂಡ್​ ಮರ್ಡರ್ ಅಂತ ಸಂಬಂಧಿಕರು ಆರೋಪಿಸುತ್ತಿದ್ದಾರೆ.ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಮಹಿಳೆಯ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ.

ಇದು ಸಹಜ ಸಾವಾ ಅಥವಾ ರೇಪ್ ಆ್ಯಂಡ್​ ಮರ್ಡರ್ ಮಾಡಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಮೃತ ಮಹಿಳೆ ಹೆಸರು ಪಕ್ಕಿರವ್ವ ನಿಂಗಪ್ಪ ಸಣ್ಣತಮ್ಮಣ್ಣನವರ. ಕೋಡ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳು ಮರಿ ಯಾರು ಇಲ್ಲಾ, ಗಂಡ ಸಾವನ್ನಪ್ಪಿದ ನಂತರ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದರು.ಫೆಬ್ರುವರಿ 15 ರಂದು ಕೋಡ್ ಗ್ರಾಮದಿಂದ ಜಾತ್ರೆಗೆ ಹೋಗುತ್ತೇನೆಂದು ಹೋಗಿದ್ದ ಮಹಿಳೆ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ಹೊರವಲಯದಲ್ಲಿರೋ ದುರ್ಗಾದೇವಿ ದೇವಾಲಯದ ಬಳಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ