9 ವಿ.ವಿ. ಮುಚ್ಚುವುದು ಸರ್ಕಾರದ ಅವಿವೇಕತನ
ಗ್ಯಾರಂಟಿ ಭ್ರಮೆಯಿಂದ ಹೊರಬಂದು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲಿ; ಬಿ.ವೈ. ವಿಜಯೇಂದ್ರ
9 ವಿ.ವಿ. ಮುಚ್ಚುವುದು ಸರ್ಕಾರದ ಅವಿವೇಕತನಗ್ಯಾರಂಟಿ ಭ್ರಮೆಯಿಂದ ಹೊರಬಂದು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲಿಬೆಂಗಳೂರಿನ ಬಗ್ಗೆ ಡಿಕೆಶಿ ಹೇಳಿಕೆ ದುರದೃಷ್ಟಕರಬಿ.ವೈ. ವಿಜಯೇಂದ್ರ ಹೇಳಿಕೆ
ಆರ್ಥಿಕ ಮುಗ್ಗಟ್ಟನ್ನು ಮುಂದೆ ಮಾಡಿ ಸರ್ಕಾರ 9 ವಿವಿ ಗಳನ್ನು ಮುಚ್ಚಲು ಕೈಗೊಂಡಿರುವುದು ಅವಿವೇಕತನದ ನಿರ್ಧಾರವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಂಪುಟ ಸಮಿತಿಯ ವರದಿಯಾಧರಿಸಿ ರಾಜ್ಯ ಸರ್ಕಾರ 9 ವಿವಿ ಗಳನ್ನು ಬಂದ್ ಮಾಡಲು ತಿರ್ಮಾನಿಸಿರುವುದು ಅವೈಜ್ಞಾನಿಕ. ಹಣಕಾಸಿನ ಮುಗ್ಗಟ್ಟನ್ನು ಮುಂದು ಮಾಡಿ, ಸರ್ಕಾರದ ಆಲೋಚನೆ ಅವಿವೇಕತನದಿಂದ ಕೂಡಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟದ ನಿರ್ಣಯವನ್ನು ಕೈಗೊಂಡಿದ್ದು, ಬಿಜೆಪಿ ಅದರ ಬೆನ್ನಿಗೆ ನಿಲ್ಲಲಿದೆ. ವಿವಿ. ಗಳನ್ನು ಮುಚ್ಚಲು ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದರು.
ಇನ್ನು ಈ ಬಾರಿ ಬಿಸಿಲು ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಗ್ಯಾರಂಟಿಗಳ ಭ್ರಮೆಯಿಂದ ಹೊರ ಬಂದು ಮುಂದೆ ಎದುರಾಗಬಹುದಾದ ಬರಗಾಲವನ್ನು ನಿವಾರಿಸಲು ಯೋಚಿಸಬೇಕು. ಈಗಾಗಲೇ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಂಕಷ್ಟವನ್ನು ನಿರ್ಲಕ್ಷಿಸಬಾರದು ಎಂದರು.
2-3 ವರ್ಷ ಕಳೆದರೂ, ಆ ಭಗವಂತನೇ ಅವತರಿಸಿ ಬಂದರೇ ಬೆಂಗಳೂರನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬೆಂಗಳೂರನ್ನು ಸಿಂಗಾಪೂರ ಮಾಡುವ ಭರವಸೆ ನೀಡಿ ಡಿಕೆ ಶಿವಕುಮಾರ ಅಧಿಕಾರಕ್ಕೆ ಬಂದಿದ್ದಾರೆ. ಸರ್ಕಾರದ ಯೋಗ್ಯತೆಗೆ ಬೆಂಗಳೂರಿನ ಗುಂಡಿ ಮುಚ್ಚಲು ಆಗುತ್ತಿಲ್ಲ. ಇದು ದುರಂತ ಎಂದರು.
Laxmi News 24×7