Breaking News

ಫೈನಾನ್ಸ್‌ಗಳ ಹಾವಳಿಗೆ ಮೊದಲ ಬಲಿ.

Spread the love

ಬೆಳಗಾವಿ:  ಜಿಲ್ಲೆಯ ಕಾಕತಿ ಸಮೀಪದ ದಾಬಾ ಬಳಿ ಫೈನಾನ್ಸ್‌ ಸಂಸ್ಥೆಗಳ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ (52) ಬಾವಿಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿದ್ದ ಸರೋಜಾ, ಸಬ್ಸಿಡಿ ಯೋಜನೆಯ ಅಸರೆಗಾಗಿ ಸಾಲದ ಅರ್ಧ ಹಣವನ್ನು ಯಮನಾಪುರದ ಹೊಳೆಪ್ಪ ದಡ್ಡಿ ಎಂಬ ವ್ಯಕ್ತಿಗೆ ನೀಡಿದ್ದರು. ಎಲ್ಲ ಕಂತು ತಾನೇ ಪಾವತಿಸುವ ಭರವಸೆ ನೀಡಿದ್ದ ಹೊಳೆಪ್ಪ ಮೋಸಮಾಡಿದ ಹಿನ್ನೆಲೆ, ಈ ಕಿರುಕುಳವನ್ನು ತಾಳಲಾರದೆ ಸರೋಜಾ ಸಾವಿಗೆ ಶರಣಾದರು.

ಈ ದುರ್ಘಟನೆಗೆ ಆಕ್ರೋಶಗೊಂಡ ಸ್ಥಳೀಯರು ಫೈನಾನ್ಸ್‌ಗಳ ಹಾವಳಿಯನ್ನು ಖಂಡಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭವಾಗಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ