Breaking News

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಎಲ್​ಆರ್​ಟಿ ಯೋಜನೆ ಜಾರಿಗೆ ತರಲು ಚಿಂತನೆ: ಸಂತೋಷ ಲಾಡ್

Spread the love

ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಬಿಆರ್​ಟಿಎಸ್ ಬಸ್​ ಬದಲು ಲಘು ರೈಲು (ಎಲ್​ಆರ್​ಟಿ) ಯೋಜನೆ ಜಾರಿಗೆ ತರಲು ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಪಿಪಿಪಿ ಮಾಡಲ್​ನಲ್ಲಿ ಬರಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಬರುವುದರಿಂದ ಅವರೇ ಬಂಡವಾಳ ಹೂಡಿಕೆ ಮಾಡಬೇಕು. ಕಾರಿಡಾರ್ ನಿರ್ಮಾಣ ಹಾಗೂ ಬಸ್ ನಿರ್ವಹಣೆ ಮಾಡಬೇಕು ಎಂಬ ಯೋಜನೆ ಇಟ್ಟುಕೊಂಡಿದ್ದೇವೆ ಎಂದರು.

ಎಲ್​ಆರ್​ಟಿ ಪ್ರಾರಂಭವಾದರೆ ಏಕಕಾಲಕ್ಕೆ 200-250 ಜನ ಪ್ರಯಾಣ ಮಾಡಬಹುದು. ಎಲೆಕ್ಟ್ರಿಕ್ ಇರುವುದರಿಂದ ವಾಯು ಮಾಲಿನ್ಯ ಕೂಡ ತಡೆಗಟ್ಟಬಹುದು ಎಂದು ಅವರು ಹೇಳಿದರು.

ಜನವರಿಯಲ್ಲಿಯೇ ಬಿಆರ್​ಟಿಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಈ ಸಾರಿಗೆಯಲ್ಲಿ ಏನೆಲ್ಲಾ ಬದಲಾವಣೆ ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಿದ್ದೇವೆ. ಕಳೆದ ತಿಂಗಳು ನಾನೇ ವೈಯಕ್ತಿಕವಾಗಿ ಫ್ರಾನ್ಸ್​ಗೆ ಹೋಗಿದ್ದೆ. ನಾನು ಅಲ್ಲಿನ ಕಂಪನಿ ಜೊತೆ ಮಾತಾಡಿದ್ದೇನೆ. ಇದೊಂದು ಪಿಪಿಪಿ ಪ್ರಾಜೆಕ್ಟ್ ಆಗಿದ್ದು, ಇದರ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿ, ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಅವರು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ